ರಾಜ್ಯದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ಉತ್ತಮ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಬಿಜೆಪಿಯೇ ಉತ್ತಮ ಆಡಳಿತ ನಡೆಸಲು ಸಿದ್ಧವಿದೆ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ. 

ಬೆಳಗಾವಿ: ರಾಜ್ಯದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ಉತ್ತಮ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಬಿಜೆಪಿಯೇ ಉತ್ತಮ ಆಡಳಿತ ನಡೆಸಲು ಸಿದ್ಧವಿದೆ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬಿಜೆಪಿ ಮನೆ ತುಂಬಿದೆ. ಪಕ್ಷಕ್ಕೆ ಹೊರಗಿನವರ ಅಗತ್ಯ ಇಲ್ಲ. ಆದರೆ ಪಕ್ಷದ ತತ್ವ, ಸಿದ್ಧಾಂತ ನಂಬಿ ಬರುವವರನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ. ತಮಗೆ ಆಮಿಷವೊಡ್ಡಿದ ನಾಯಕರು ಯಾರು ಎಂಬುದನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಬಹಿರಂಗಪಡಿಸಬೇಕು. 

ನಾನು ಸೇರಿದಂತೆ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಾರ‍ಯರೂ ಕರೆ ಮಾಡಿಲ್ಲ. ಆದಕಾರಣ ಅವರನ್ನು ಸಂಪರ್ಕಿಸಲು ಯತ್ನಿಸಿದ್ದು ಯಾರು ಎಂಬುದನ್ನು ಅವರು ಹೇಳಬೇಕೆಂದರು. 

ಮುಂಬರುವ ಲೋಕಸಭೆ ಚುನಾವಣೆ ವೇಳೆ ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಮತ್ತು ನನ್ನ ಪುತ್ರ ಅಮಿತ್‌ ಕೋರೆ ಆಕಾಂಕ್ಷಿಗಳಾಗಿದ್ದೇವೆ. ನನಗೆ ಇನ್ನೂ ವಯಸ್ಸಾಗಿಲ್ಲ. ನಾನು ಕೂಡ ಒಬ್ಬ ಆಕಾಂಕ್ಷಿ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದರು.