ಭಾರತದ ಮಾಧ್ಯಮಗಳು ಸೌಮ್ಯವೆಂದ ಜೂ.ಟ್ರಂಪ್‌ !

I Love Indian Media Its Mild And Nice Says Donald Trump Jr
Highlights

‘ಆಕ್ರಮಣಕಾರಿ ಮತ್ತು ಕ್ರೂರ’ವಾದ ಅಮೆರಿಕದ ಮಾಧ್ಯಮಗಳಿಗೆ ಹೋಲಿಸಿದಲ್ಲಿ, ಭಾರತದ ಮಾಧ್ಯಮಗಳು ‘ಸೌಮ್ಯ ಮತ್ತು ಒಳ್ಳೆಯವು’ ಆಗಿದ್ದು, ಅವುಗಳನ್ನು ಪ್ರೀತಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಮಗ ಡೊನಾಲ್ಡ್‌ ಟ್ರಂಪ್‌ ಜೂನಿಯರ್‌ ಹೇಳಿದ್ದಾರೆ.

ನವದೆಹಲಿ: ‘ಆಕ್ರಮಣಕಾರಿ ಮತ್ತು ಕ್ರೂರ’ವಾದ ಅಮೆರಿಕದ ಮಾಧ್ಯಮಗಳಿಗೆ ಹೋಲಿಸಿದಲ್ಲಿ, ಭಾರತದ ಮಾಧ್ಯಮಗಳು ‘ಸೌಮ್ಯ ಮತ್ತು ಒಳ್ಳೆಯವು’ ಆಗಿದ್ದು, ಅವುಗಳನ್ನು ಪ್ರೀತಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಮಗ ಡೊನಾಲ್ಡ್‌ ಟ್ರಂಪ್‌ ಜೂನಿಯರ್‌ ಹೇಳಿದ್ದಾರೆ.

ಶನಿವಾರ ಭಾರತಕ್ಕೆ ಆಗಮಿಸಿರುವ ಅವರು ಜಾಗತಿಕ ಉದ್ಯಮ ಸಮಾವೇಶದಲ್ಲಿ ಮಾತನಾಡಿದರು. ‘ಭಾರತದ ಇತಿಹಾಸದಲ್ಲೇ, ಭಾರತದ ಮಾಧ್ಯಮಗಳನ್ನು ಪ್ರೀತಿಸುತ್ತೇನೆ ಎಂದು ಹೇಳಿದ ಪ್ರಥಮ ವ್ಯಕ್ತಿ ನಾನು. ಅವು ಸೌಮ್ಯ ಮತ್ತು ಒಳ್ಳೆಯವು. ನಾನು ಇಲ್ಲಿಗೆ ಮೊದಲ ಬಾರಿ ಬರುತ್ತಿರುವುದಲ್ಲ. 10 ವರ್ಷಗಳಿಂದ ನಾನು ಇಲ್ಲಿಗೆ ಬರುತ್ತಿದ್ದೇನೆ. ಹೀಗಾಗಿ, ನಾನು ಏನು ಎಂಬುದು ಪ್ರತಿಯೊಬ್ಬರಿಗೂ ಅರ್ಥವಾಗಿದೆ. ಆದರೆ, ವಾಷಿಂಗ್ಟನ್‌ ಪೋಸ್ಟ್‌ ನನ್ನನ್ನು ಟೀಕಿಸುತ್ತದೆ’ ಎಂದು ಟ್ರಂಪ್‌ ಜೂನಿಯರ್‌ ತಿಳಿಸಿದರು.

ಭಾರತದಲ್ಲಿ ಕಳೆದ ಮೂರು ವರ್ಷಗಳಿಂದ ಅತ್ಯುತ್ತಮ ವ್ಯವಹಾರಗಳನ್ನು ಕುದುರಿಸಿದ್ದೇನೆ, ಈಗ ಹತ್ತುಪಟ್ಟು ಹೆಚ್ಚು ಹೂಡಿಕೆ ಸಿದ್ಧನಾಗಿದ್ದೇನೆ ಎಂದು ಅವರು ಹೇಳಿದರು. ಅಮೆರಿಕದ ಮಾಧ್ಯಮಗಳನ್ನು ಹಿರಿಯ ಟ್ರಂಪ್‌ ಸದಾ ತೆಗಳುತ್ತಾರೆ. ಈ ಹಿನ್ನೆಲೆಯಲ್ಲಿ ಕಿರಿಯ ಟ್ರಂಪ್‌ ಹೇಳಿಕೆ ಮಹತ್ವ ಪಡೆದಿದೆ.

loader