ಕಾಂಗ್ರೆಸ್​ಗೆ ಸೇರ್ಪಡೆಯಾಗುವ ಬಿಜೆಪಿಯ ಪ್ರಮುಖ 20 ನಾಯಕರ  ಪಟ್ಟಿ ನನ್ನ ಬಳಿ ಇದೆ ಎಂದು ಪಕ್ಷದ ಕಚೇರಿಯಲ್ಲಿ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಗುಂಡ್ಲುಪೇಟೆ (ಏ.02):ಕಾಂಗ್ರೆಸ್​ಗೆ ಸೇರ್ಪಡೆಯಾಗುವ ಬಿಜೆಪಿಯ ಪ್ರಮುಖ 20 ನಾಯಕರ ಪಟ್ಟಿ ನನ್ನ ಬಳಿ ಇದೆ ಎಂದು ಪಕ್ಷದ ಕಚೇರಿಯಲ್ಲಿ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಸೇರ್ಪಡೆಯಾಗುವ ಬಿಜೆಪಿ ನಾಯಕರ ಪಟ್ಟಿ ನನ್ನ ಬಳಿ ಇದೆ. ಸಮಯ ಬಂದಾಗ ಆ ಪಟ್ಟಿಯನ್ನ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿಕೆಗೆ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಹಣ ಹಂಚುವುದು, ಹಣ ಸಾಗಿಸುವುದು ಬಿಜೆಪಿ ಸಂಸ್ಕೃತಿ. ಹಿಂದೆ ಬಿಜೆಪಿಯವರು ಹೇಗೆ ಹಣ ಸಾಗಿಸಿದ್ದರೆಂಬುದು ಗೊತ್ತಿದೆ. ಹಣ ಸಾಗಿಸುತ್ತಿದ್ದವರನ್ನು ನಾನೇ ಖುದ್ದಾಗಿ ಹಿಡಿದು ಕೊಟ್ಟಿದ್ದೇನೆ ಎಂದು ಮಾಜಿ ಸಿಎಂ ಬಿಎಸ್​​​ವೈಗೆ ಸಚಿವ ಪರಮೇಶ್ವರ್​ ಟಾಂಗ್ ನೀಡಿದ್ದಾರೆ.