ಚುನಾವಣಾ ಹೊಸ್ತಿಲಲ್ಲಿರುವ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನಡುವೆ ಭುಗಿಲೆದ್ದಿರುವ ಮುನಿಸು ಮುಗಿಯೋ ಹಾಗೇ ಕಾಣ್ತಿಲ್ಲ. ಸಿಎಂ ಜೊತೆ ನಾನು ವೇದಿಕೆ ಹಂಚಿಕೊಳ್ಳಲ್ಲ ಅನ್ನೋ ಸಂದೇಶವನ್ನ ಹೈಕಮಾಂಡ್ಗೆ ರವಾನೆ ಮಾಡಿದ್ದಾರೆ.
ಬೆಂಗಳೂರು (ಸೆ.16): ಚುನಾವಣಾ ಹೊಸ್ತಿಲಲ್ಲಿರುವ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನಡುವೆ ಭುಗಿಲೆದ್ದಿರುವ ಮುನಿಸು ಮುಗಿಯೋ ಹಾಗೇ ಕಾಣ್ತಿಲ್ಲ. ಸಿಎಂ ಜೊತೆ ನಾನು ವೇದಿಕೆ ಹಂಚಿಕೊಳ್ಳಲ್ಲ ಅನ್ನೋ ಸಂದೇಶವನ್ನ ಹೈಕಮಾಂಡ್ಗೆ ರವಾನೆ ಮಾಡಿದ್ದಾರೆ.
ಸಂಪುಟ ವಿಸ್ತರಣೆ ವೇಳೆ ಎದ್ದಿದ್ದ ಸಿಎಂ ಸಿದ್ದರಾಮಯ್ಯ ಮೇಲೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಮುನಿಸು ಇನ್ನು ತಣ್ಣಗಾಗಿಲ್ಲ. ಅದೇ ರೀತಿ ಮುಖ್ಯಮಂತ್ರಿ ಕೂಡ ಪರಮೇಶ್ವರ್ ಜೊತೆ ಚರ್ಚಿಸಿದೇ ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದುವರೆಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಉಭಯ ನಾಯಕರು ಒಗ್ಗೂಡಿಕೊಂಡು ಪಕ್ಷವನ್ನ ಮುನ್ನಡೆಸಬೇಕಿತ್ತು. ಆದರೆ ಅದ್ಯಾವ ಲಕ್ಷಣವೂ ಇದೀಗ ಕಾಣ್ತಿಲ್ಲ.
ಸಿಎಂ ಭಾಗವಹಿಸುವ ಕಾರ್ಯಕ್ರಮಕ್ಕೆ ಗೈರಾಗಲು ಪರಂ ತೀರ್ಮಾನ
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸೌಜನ್ಯಕ್ಕಾದರೂ ಪಕ್ಷದ ಅಧ್ಯಕ್ಷರಾದ ನನ್ನೊಂದಿಗೆ ಸಿಎಂ ಚರ್ಚೆ ಮಾಡಲಿಲ್ಲ ಹಾಗೂ ತಮ್ಮಿಂದ ಖಾಲಿಯಾದ ಮಂತ್ರಿ ಸ್ಥಾನಕ್ಕೆ ತಮ್ಮ ಸಮುದಾಯದ ದಲಿತ ಎಡಗೈ ಗುಂಪಿನ ಮುಖಂಡರಿಗೆ ಸ್ಥಾನ ನೀಡಬೇಕೆನ್ನುವ ಒತ್ತಾಸೆ ಪರಮೇಶ್ವರರದ್ದಾಗಿತ್ತು. ಅದೂ ಆಗಲಿಲ್ಲ ಅನ್ನೋ ಅಸಮಾಧಾನ ಅಧ್ಯಕ್ಷರದ್ದು. ಆದರೆ ಇದ್ಯಾವುದನ್ನೂ ಸಿದ್ದರಾಮಯ್ಯ ಗಣನೆಗೆ ತೆಗೆದುಕೊಳ್ಳದೇ ತಮ್ಮಿಷ್ಟದಂತೆ ತೀರ್ಮಾನ ಕೈಗೊಂಡಿದ್ದರು. ಇದಕ್ಕೆ ಪರಂ ಗರಂ ಆಗಿದ್ದರು. ಜೊತೆಗೆ ಸಿದ್ದರಾಮಯ್ಯ ಪಾಲ್ಗೊಳ್ಳುವ ಪಕ್ಷದ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಬಾರದು ಅನ್ನೋ ನಿರ್ದಾರಕ್ಕೆ ಪರಮೇಶ್ವರ್ ಬಂದಿದ್ದಾರೆ. ಹಾಗಾಗಿಯೇ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪರಂ ಗೈರಾಗಿದ್ದರು ಎನ್ನಲಾಗಿದೆ.
ಆದರೆ ಸಿಎಂ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮತ್ತು ಕೊನೆ ಕ್ಷಣದಲ್ಲಿ ಬೆಳಗಾವಿ ಕಾಋ್ಯಕ್ರಮಕ್ಕೆ ಆಹ್ವಾನಿಸಿದ್ದರಿಂದ ಹೋಗಲಾಗಲಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
