ರವಿ ಬೆಳಗೆರೆ ಬಂಧನ ಹಿನ್ನೆಲೆಯಲ್ಲಿ  ತಾಹೀರ್'ನನ್ನು ಪೊಲೀಸರು ಬಂಧಿಸಿದಾಗ ಸುಪಾರಿ ಕಿಲ್ಲರ್  ಶಶಿಧರ್ ಮುಂಡೇವಾಡಗೆ ಗನ್ ಮಾರಿದ್ದ ಎಂಬುದು ಮಾಹಿತಿ ಸಿಕ್ಕಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ನಡೆಸುವ ವೇಳೆ ಈ ಮಾಹಿತಿ ಸಿಕ್ಕಿದೆ.

ಬೆಂಗಳೂರು (ಡಿ.08): ರವಿ ಬೆಳಗೆರೆ ಬಂಧನ ಹಿನ್ನೆಲೆಯಲ್ಲಿ ತಾಹೀರ್'ನನ್ನು ಪೊಲೀಸರು ಬಂಧಿಸಿದಾಗ ಸುಪಾರಿ ಕಿಲ್ಲರ್ ಶಶಿಧರ್ ಮುಂಡೇವಾಡಗೆ ಗನ್ ಮಾರಿದ್ದ ಎಂಬುದು ಮಾಹಿತಿ ಸಿಕ್ಕಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ನಡೆಸುವ ವೇಳೆ ಈ ಮಾಹಿತಿ ಸಿಕ್ಕಿದೆ. ತಾಹೀರ್ ವೆಪನ್ ಸೆಲ್ಲರ್ ಮಾತ್ರ. ಆದರೆ ಬೆಳಗೆರೆ ಬಂಧನಕ್ಕೂ ಗೌರಿ ಹತ್ಯೆ ಪ್ರಕರಣಕ್ಕೂ ಸಂಬಂಧ ಇಲ್ಲ. ಬೆಳಗೆರೆ ಬಂಧನ ವಿಚಾರ ಎಲ್ಲವೂ ಪೊಲೀಸ್ ಪ್ರಕ್ರಿಯೆಯಾಗಿದ್ದು ಮಾಹಿತಿ ಇದ್ದ ಕಾರಣದಿಂದಲೇ ಈ ಪ್ರಕ್ರಿಯೆ ಆಗಿರುತ್ತದೆ. ಮಾಹಿತಿ ಇಲ್ಲದೇ ಏನೂ ಅಗುವುದಿಲ್ಲ.

ಕಳೆದ ಭಾನುವಾರ ತಾಹೀರ್'ನನ್ನು ಸಿಸಿಬಿಯವರು ಬಂಧಿಸಿದ್ದರು. ಬಂಧಿಸಿದ ಬಳಿಕ ಯಾರ್ಯಾರಿಗೆ ಗನ್ ಮಾರಿದ್ದಾನೆ ಎಂಬುದು ತನಿಖೆ ಮಾಡಿದಾಗ ಶಶಿಧರ್ ಮುಂಡೆವಾಡಿಗೆ ಗನ್ ಮಾರಿದ್ದು ಮಾಹಿತಿ ಸಿಕ್ಕಿದೆ. ಅದರಂತೆ ಶಶಿಧರ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಿಸಿಬಿಗೆ ಕೆಲವು ಮಾಹಿತಿ ಸಿಕ್ಕಿದೆ. ಅದರಂತೆ ಇಂದಿನ ಬಂಧನ ಪ್ರಕ್ರಿಯೆ ನಡೆದಿದೆ. ಶಶಿಧರ್ ಮುಂಡೇವಾಡಿ ಬಳಸಿದ್ದ ಗನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ಆ ಗನ್ ಎಲ್ಲೆಲ್ಲಿ ಬಳಕೆಯಾಗಿದೆ ಅಂತ ತಿಳಿಯಲಿದೆ. ಬೆಳಗರೆ ಬಂಧನದ ಬಗ್ಗೆ ತನಿಖೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡೋದು ಸರಿಯಲ್ಲ. ಈ ಬಗ್ಗೆ ಪೊಲೀಸ್ ಆಯುಕ್ತರು ಅಥವಾ ಸಿಸಿಬಿಯವರು ಮಾಹಿತಿ ನೀಡುತ್ತಾರೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ.