ಮುಂಬೈ  :  ಪುಲ್ವಾಮದಲ್ಲಿ ಭೀಕರ ಉಗ್ರರ ದಾಳಿ ನಡೆದು 44 ಯೋಧರು ಹುತಾತ್ಮರಾಗಿದ್ದು, ಈ ಘಟನೆ ಪ್ರತೀ ಭಾರತೀಯನ ರಕ್ತ ಕುದಿಯುವಂತೆ ಮಾಡಿದೆ. 

ಉಪವಾಸ ನಿರತರಾಗಿ ಆಸ್ಪತ್ರೆಯಲ್ಲಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಈಗಲೂ ಮಿಲಿಟರಿ ಟ್ರಕ್ ಚಲಿಸುವಷ್ಟು ಸಾಮರ್ಥ್ಯ ತಮ್ಮಲ್ಲಿದೆ ಎಂದು ಉಗ್ರರ ದಾಳಿ ಬಗ್ಗೆ ಆಕ್ರೋಶಗೊಂಡು ಹೇಳಿಕೆ ನೀಡಿದ್ದಾರೆ.   

ಸೇನಾ ಪಡೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸಿದ್ದ ಅಣ್ಣಾ ಹಜಾರೆ, ನನಗೆ ಗನ್ ಎತ್ತಿ ಹಿಡಿಯುವಷ್ಟು ಶಕ್ತಿ ಇಲ್ಲದೇ ಇರಬಹುದು, ಆದರೆ ಅಗತ್ಯವಿದ್ದಲ್ಲಿ ಈಗಲೂ ಸೇನೆಯಲ್ಲಿ ಚಾಲಕನಾಗಿ ಸೇನಾ ಟ್ರಕ್ ಮುನ್ನಡೆಸಬಲ್ಲೇ. ಈ ಮೂಲಕ ದೇಶಸೇವೆ ಮಾಡಲು ಶಕ್ತನಾಗಿದ್ದೇನೆ ಎಂದು ಅಣ್ಣಾ ಹಜಾರೆ ಹೇಳಿದ್ದಾಗಿ ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ. 

ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ  ಸಂಘಟನೆ ಪುಲ್ವಾಮ ದಾಳಿಯ ಹೊಣೆ ಹೊತ್ತಿದ್ದು, ದಶಕದಲ್ಲೇ ಇದೊಂದು ಭೀಕರ ದಾಳಿ ಎಂದು ಬಿಂಬಿಸಲಾಗಿದೆ.