ಕ್ಷೇತ್ರ​ದ 40 ವರ್ಷದ ಇತಿಹಾಸದಲ್ಲಿ ಈ ಮಟ್ಟದ ಅನುದಾನ ಬಂದಿಲ್ಲ. ಈ ಕು​ರಿತು ಯಾರೇ ಬಹಿ​ರಂಗ ಚರ್ಚೆಗೆ ಬಂದರೂ ದಾಖಲೆ ಸಮೇತ ಚರ್ಚೆಗೆ ಸಿದ್ಧ​ನಿ​ದ್ದೇನೆ.

ಕಡೂರು(ಫೆ.19): ಎಲ್ಲೋ ಕುಳಿತು ಜನರಿಗೆ ಸಿಗದ ವೀಕೆಂಡ್‌ ಶಾಸಕ ಎಂದು ಟೀಕಿಸುವವರು ಕ್ಷೇತ್ರದ ರಸ್ತೆಗಳಲ್ಲಿ ತಿರುಗಾಡಿ ಬರಲಿ ಎಂದು ಶಾಸಕ ವೈ.ಎಸ್‌.ವಿ. ದತ್ತ ಸವಾಲು ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೂರೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರ​ದಲ್ಲಿ ರಸ್ತೆ​ಗ​ಳ ಸಂಪರ್ಕ ಕ್ರಾಂತಿ ನಡೆದಿದೆ. ಕ್ಷೇತ್ರ​ದ 40 ವರ್ಷದ ಇತಿಹಾಸದಲ್ಲಿ ಈ ಮಟ್ಟದ ಅನುದಾನ ಬಂದಿಲ್ಲ. ಈ ಕು​ರಿತು ಯಾರೇ ಬಹಿ​ರಂಗ ಚರ್ಚೆಗೆ ಬಂದರೂ ದಾಖಲೆ ಸಮೇತ ಚರ್ಚೆಗೆ ಸಿದ್ಧ​ನಿ​ದ್ದೇನೆ. ಟೀಕಿ​ಸುವ​ವರು ನನ್ನೊಟ್ಟಿಗೆ ಬಂದರೆ ರಸ್ತೆಗಳು ಮೊದಲು ಹೇಗಿ​ದ್ದವು, ಈಗ ಹೇಗಿವೆ ಎಂಬು​ದನ್ನು ಸಾಕ್ಷಿ ಸಮೇ​ತ ತೋರಿ​ಸು​ತ್ತೇನೆ. ವಾಸ್ತವತೆ ಅರಿತು ಟೀಕಿ​ಸಲಿ ಎಂದು ಸವಾಲು ಹಾಕಿದ್ದಾರೆ.