ತಾವು ವಿಷ್ಣುವಿನ 10ನೇ ಅವತಾರ ಎಂದು ಕೆಲಸಕ್ಕೆ ಹಾಜರಾಗದ ಸರ್ಕಾರಿ ಅಧಿಕಾರಿ

First Published 19, May 2018, 12:22 PM IST
I am Kalki, Lord Vishnu's 10th avatar, can't come to work
Highlights

ಗುಜರಾತ್ ಸರ್ಕಾರಿ ಅಧಿಕಾರಿಯೋರ್ವರು ತಾವು ವಿಷ್ಣುವಿನ 10ನೇ ಅವತಾರವಾದ ಕಲ್ಕಿ ಎಂದು ಹೇಳಿಕೊಂಡಿದ್ದು, ಜಗದೋದ್ದಾರಕ್ಕಾಗಿ ಪ್ರಾಯಶ್ಚಿತ ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಆದ್ದರಿಂದ ತಾವು ಕೆಸಲಕ್ಕೂ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.   

ಅಹಮದಾಬಾದ್ : ಗುಜರಾತ್ ಸರ್ಕಾರಿ ಅಧಿಕಾರಿಯೋರ್ವರು ತಾವು ವಿಷ್ಣುವಿನ 10ನೇ ಅವತಾರವಾದ ಕಲ್ಕಿ ಎಂದು ಹೇಳಿಕೊಂಡಿದ್ದು, ಜಗದೋದ್ದಾರಕ್ಕಾಗಿ ಪ್ರಾಯಶ್ಚಿತ ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಆದ್ದರಿಂದ ತಾವು ಕೆಸಲಕ್ಕೂ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.   

 ರಮೇಶ್ ಚಂದ್ರ ಫೆಫರ್ ಎನ್ನುವ ಸೂಪರಿಂಟೆಂಡ್ ಇಂಜಿನಿಯರ್ ಆಗಿರುವ ಅವರು ತಮ್ಮ ಪ್ರಾಯಶ್ಚಿತದಿಂದ ಮಾತ್ರವೇ ದೇಶಕ್ಕೆ ಒಳಿತಾಗಲು ಸಾಧ್ಯ. ಉತ್ತಮ ಮಳೆ ಬೆಳೆ ಆಗಬೇಕೆಂದರೆ ತಾವು ಹೀಗೆ ಮಾಡಲೇಬೇಕು ಎಂದು ಹೇಳಿದ್ದಾರೆ. 

ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಅವರಿಗೆ ಸರ್ಕಾರದಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಈ ನೋಟಿಸ್ ಗೆ ಉತ್ತರಿಸಿದ ಅವರು ಈ ವಿಚಾರವನ್ನು ಬಹಿರಂಗ ಮಾಡಿದ್ದಾರೆ.  ತಾವು ದೇವರ ಅವತಾರ ಎಂದು ಹೇಳಿರುವ ಅವರ ಹೇಳಿಕೆ ಇದೀಗ ಸಾಮಾಜಿಕ ಫುಲ್ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. 

ಅಲ್ಲದೇ ಮುಂದಿನ ದಿನಗಳಲ್ಲಿ ತಾವು ವಿಷ್ಣುವಿನ ಅವತಾರ ಎನ್ನುವುದನ್ನು  ಸಾಬೀತುಪಡಸುತ್ತೇವೆ ಎಂದು ಹೇಳಿದ್ದಾರೆ. 2010ನೇ ಇಸವಿಯಲ್ಲಿ ತಾವು ಕಚೇರಿಯಲ್ಲಿ ಇದ್ದ ವೇಳೆ ತಮಗೆ ಒಂದು ರೀತಿಯ ವಿಚಿತ್ರ ಅನುಭವ ಉಂಟಾಯಿತು. ಅದಾದ ಬಳಿಕ ನನಗೆ ನಾನು ವಿಷ್ಣುವಿನ ಅವತಾರ ಎನ್ನುವುದು ಅರಿವಾಯಿತು ಎಂದು ಹೇಳಿದ್ದಾರೆ.

loader