ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್'ಗಳಿಂದ ಪ್ರೇರಿತರಾದ ರಮ್ಯಾ ಅಭಿಮಾನಿ ರಘು ಎಂಬವರು ಮಂಡ್ಯ ನಗರದ ಅಶೋಕನಗರ 3ನೇ ಕ್ರಾಸ್‌ನಲ್ಲಿ ರಮ್ಯಾ ಕ್ಯಾಂಟೀನ್ ಪ್ರಾರಂಭಿಸಿ ರಿಯಾಯಿತಿ ದರದಲ್ಲಿ ಉಪಾಹಾರ, ಊಟ ಒದಗಿಸುತ್ತಿದ್ದಾರೆ
ಬೆಂಗಳೂರು(ಡಿ.06): ಮಂಡ್ಯದ ಅಭಿಮಾನಿಯೊಬ್ಬರು ತನ್ನ ಹೆಸರಲ್ಲಿ ಕ್ಯಾಂಟೀನ್ ಪ್ರಾರಂಭ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಚಿತ್ರನಟಿ, ಮಾಜಿ ಸಂಸದೆ ರಮ್ಯಾ ಅಲ್ಲಿ ಊಟ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ‘ಇದು ನಿಜಕ್ಕೂ ಖುಷಿಯ ವಿಚಾರ, ಸಮಯ ಸಿಕ್ಕಾಗ ಒಂದು ದಿನ ಅಲ್ಲಿ ಊಟ ಮಾಡುವೆ’ ಎಂದು ಟ್ವೀಟ್ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್'ಗಳಿಂದ ಪ್ರೇರಿತರಾದ ರಮ್ಯಾ ಅಭಿಮಾನಿ ರಘು ಎಂಬವರು ಮಂಡ್ಯ ನಗರದ ಅಶೋಕನಗರ 3ನೇ ಕ್ರಾಸ್ನಲ್ಲಿ ರಮ್ಯಾ ಕ್ಯಾಂಟೀನ್ ಪ್ರಾರಂಭಿಸಿ ರಿಯಾಯಿತಿ ದರದಲ್ಲಿ ಉಪಾಹಾರ, ಊಟ ಒದಗಿಸುತ್ತಿದ್ದಾರೆ.
