ನಿಗಮ ಮಂಡಳಿ ಒಪ್ಪಿಕೊಳ್ಳಲ್ಲ, ಸಚಿವ ಸ್ಥಾನವೇ ಬೇಕು: ಶಾಸಕರ ಬಾಂಬ್

I am in the minister Race: Bhadravathi MLA B.K.Sangameshwar
Highlights

ನನಗೆ ನಿಗಮ ಮಂಡಳಿ ಸ್ಥಾನ ಬೇಡವೇ ಬೇಡ. ಕೊಟ್ಟರೆ ಸಚಿವ ಸ್ಥಾನವನ್ನೇ ಕೊಡಲಿ ಹೀಗೆಂದು ಕಾಂಗ್ರೆಸ್ ನಾಯಕರ ಬಳಿ ಬೇಡಿಕೆಯ ಪಟ್ಟಿ ಇಟ್ಟವರು ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್ವರ. ಯಾಕೆ ಹೀಗೆ ಹೇಳಿದ್ರು? ವಿವರ ಇಲ್ಲಿದೆ


 

ಬೆಂಗಳೂರು (ಜೂ22) ನನಗೆ ನಿಗಮ ಮಂಡಳಿ ಸ್ಥಾನ ಬೇಡವೇ ಬೇಡ. ಕೊಟ್ಟರೆ ಸಚಿವ ಸ್ಥಾನವನ್ನೇ ಕೊಡಲಿ ಹೀಗೆಂದು ಕಾಂಗ್ರೆಸ್ ನಾಯಕರ ಬಳಿ ಬೇಡಿಕೆಯ ಪಟ್ಟಿ ಇಟ್ಟವರು ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್ವರ. ಯಾಕೆ ಹೀಗೆ ಹೇಳಿದ್ರು? ವಿವರ ಇಲ್ಲಿದೆ

ನಾನು ಮೂರು ಬಾರಿ ಶಾಸಕನಾದವನು. ಜಿಲ್ಲಾ ಪ್ರಾತಿನಿಧ್ಯದ ಆಧಾರದಲ್ಲಿ ನನಗೆ ಸ್ಥಾನ ನೀಡಲೇಬೇಕು. ಶಿವಮೊಗ್ಗದಲ್ಲಿ ಬಿಜೆಪಿ ವಿರುದ್ಧ ಹೋರಾಡಬೇಕಾದ್ರೆ ಸಚಿವ ಸ್ಥಾನದ ಅಧಿಕಾರ ಅಗತ್ಯ ಎಂದು ಸಂಗಮೇಶ್ವರ ಪ್ರತಿಪಾದಿಸಿದ್ದಾರೆ. ಸಚಿವ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೊದಲ ಸಂಪುಟ ವಿಸ್ತರಣೆಯಲ್ಲಿಯೇ ನನಗೆ ಸ್ಥಾನ ಸಿಗಬೇಕಾಗಿತ್ತು. ಡಿಸಿಎಂ ಡಾ. ಜಿ.ಪರಮೇಶ್ವರ ನನಗೆ ಕಾಲ್ ಮಾಡಿ ಸಚಿವ ಸ್ಥಾನಕ್ಕೆ ರೆಡಿ ಇರಿ ಎಂದಿದ್ದರು. ಪ್ರಮಾಣವಚನದ ಹಿಂದಿನ ದಿನವೂ ಕರೆ ಮಾಡಿ ಹೇಳಿದ್ದರು. ಆದರೆ ಸಂಪುಟ ವಿಸ್ತರಣೆಯಲ್ಲಿ ನನ್ನ ಹೆಸರು ಇರಲಿಲ್ಲ.

ಹಿಂದಿನ ಸಾರಿ ನಿರಾಸೆಯಾಗಿದ್ದು ನಿಜ. ಆದರೆ ಈಗ ಮತ್ತೆ ಸಚಿವ ಸಂಪುಟ ವಿಸ್ತರಣೆ ಕಾಲ ಹತ್ತಿರವಾಗಿದ್ದು ನನಗೆ ಸ್ಥಾನ ಸಿಗುವ ಭರವಸೆ ಇದೆ ಎಂದಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪ ಅವರು ನನ್ನ ಜೊತೆ ಚೆನ್ನಾಗಿದ್ದಾರೆ. ರಾಜಕೀಯ ವಿಚಾರ ಬಂದಾಗ ನಮ್ಮ ಪಕ್ಷ ನಮಗೆ, ಅವರ ಪಕ್ಷ ಅವರಿಗೆ ಎಂದು ಹೇಳಲು ಸಂಗಮೇಶ್ವರ ಮರೆತಿಲ್ಲ.

 


 

 

 

 

 

 

loader