ನಗರದಲ್ಲಿ ಸಾರ್ವಜನಿಕರಿಗೆ ರಕ್ಷಣೆ ನೀಡುವ ಸಲುವಾಗಿ ರೂಪುಗೊಂಡಿರುವ ‘ಐ-ವಿವೇಕ’ ವೆಬ್​ಸೈಟ್ ಅನಾವರಣಗೊಳಿಸಿ ಮಾತನಾಡಿದರು.

ಬೆಂಗಳೂರು(ಮೇ.03): ನನಗೆ ಕಂಪ್ಯೂಟರ್ ಆಪರೇಟ್ ಮಾಡೋದು ಗೊತ್ತಿಲ್ಲಾ, ನಾನು ಕಂಪ್ಯೂಟರ್​ ಕಲಿಯಕ್ಕೂ ಹೋಗಲಿಲ್ಲ ಅಲ್ಲದೆ ಹಣಕಾಸು ಮಂತ್ರಿಯಾದ ಸಂದರ್ಭದಲ್ಲೂ ಕಲಿಯಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸಾರ್ವಜನಿಕರಿಗೆ ರಕ್ಷಣೆ ನೀಡುವ ಸಲುವಾಗಿ ರೂಪುಗೊಂಡಿರುವ ‘ಐ-ವಿವೇಕ’ ವೆಬ್​ಸೈಟ್ ಅನಾವರಣಗೊಳಿಸಿ ಮಾತನಾಡಿದರು. ಸಂಸ್ಥೆಗಳು ಜನರಿಗೆ ವಂಚನೆ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಸಂಸ್ಥೆಗಳ ವಿರುದ್ಧ ವೆಬ್​ಸೈಟ್​ನಲ್ಲಿ ದೂರು ದಾಖಲಿಸಬಹುದು ಎಂದರು.

ಗೃಹ ಸಚಿವ ಪರಮೇಶ್ವರ್, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಠಿಯಾ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.