ಬೆಂಗಳೂರು[ಸೆ.13]: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬೆಂಬಲಿಸಿ ಬುಧವಾರ ವಿವಿಧ ಒಕ್ಕಲಿಗ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ರಾರ‍ಯಲಿಯಲ್ಲಿ ಪಾಲ್ಗೊಳ್ಳುವಂತೆ ನನಗೂ ಆಹ್ವಾನ ಬಂದಿತ್ತು. ಆದರೆ, ಮಾಜಿ ಪ್ರಧಾನಿ ಎಂಬ ಕಾರಣಕ್ಕಾಗಿ ಹೋಗಲಿಲ್ಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ಪಕ್ಷದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆ ರಾರ‍ಯಲಿಯಲ್ಲಿ ಭಾಗವಹಿಸದೇ ಇರುವ ಬಗ್ಗೆ ಅಪಾರ್ಥ ಹುಡುಕೋದು ಬೇಡ ಎಂದೂ ಗೌಡರು ಹೇಳಿದ್ದಾರೆ.

ಅಣ್ಣಾ.. ಅಣ್ಣಾ.. ಅಳುತ್ತಲೇ HDK ಕಾಲೆಳೆದ ಯುವಕ.. ವಿಡಿಯೋ ಫುಲ್ ವೈರಲ್

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್‌ ಅವರು ಯಾವುದೇ ರೀತಿ ಜಾರಿ ನಿರ್ದೇಶನಾಲಯದ ತನಿಖೆಗೆ ಅಸಹಕಾರ ತೋರಿಸಿಲ್ಲ. ತಂದೆ ಕಾರ್ಯಕ್ಕೂ ಅವರಿಗೆ ಹೋಗಲು ಅವಕಾಶ ಕೊಡಲಿಲ್ಲ. ಅದು ನನ್ನ ಮನಸ್ಸಿಗೆ ನೋವಾಗಿದೆ ಎಂದರು.

ಸಂಘಟಕರಿಂದ ನನಗೂ ಆಹ್ವಾನ ಬಂದಿತ್ತು. ನಾನು ಮಾಜಿ ಪ್ರಧಾನಿಯಾಗಿ ಅ ಪ್ರತಿಭಟನಾ ರಾರ‍ಯಲಿಗೆ ಹೋಗಿಲ್ಲ. ಆದರೆ, ನಮ್ಮ ಪಕ್ಷದ ಹಲವು ಶಾಸಕರು, ಮಾಜಿ ಶಾಸಕರು ಹಾಗೂ ನೂರಾರು ಕಾರ್ಯಕರ್ತರು ಅದರಲ್ಲಿ ಭಾಗಿಯಾಗಿದ್ದರು ಎಂದು ಹೇಳಿದರು.

ನನ್ನನ್ನು ಯಾರೂ ಆಹ್ವಾನಿಸಿಲ್ಲ : ಅದಕ್ಕೆ ಪ್ರತಿಭಟನೆಗೆ ಹೋಗಿಲ್ಲ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೌಡರು, ಕುಮಾರಸ್ವಾಮಿ ಅವರು ಶಿವಕುಮಾರ್‌ ಅವರ ಮನೆಗೆ ಹೋಗಿ ಅವರ ತಾಯಿಯನ್ನು ಭೇಟಿಯಾಗಿ ಧೈರ್ಯ ತುಂಬಿ ಬಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೂ ಹೇಳಿಕೆ ನೀಡಿದ್ದಾರೆ. ಅದರಲ್ಲಿ ಯಾವುದೇ ಅಪಾರ್ಥ ಹುಡುಕೋದು ಬೇಡ. ಶಿವಕುಮಾರ್‌ ಬೆನ್ನಿಗೆ ನಿಲ್ಲುವುದು ನಮಗೂ ಗೊತ್ತಿದೆ. ಬೇರೆ ಅರ್ಥ ಕಲ್ಪಿಸೋದು ಬೇಡ ಎಂದರು.