ಅಮೆರಿಕಾದಲ್ಲಿ ಭಾರತದ ಟೆಕ್ಕಿಯನ್ನು ಗುಂಡಿಕ್ಕಿ ಕೊಲೆ

Hyderabad techie Sharath shot in US
Highlights

  • ನಿನ್ನೆ ಸಂಜೆ 7 ಗಂಟೆ ಸಮಯದಲ್ಲಿ ಕಾನ್ಸಾನ್ ಪಟ್ಟಣದ ರೆಸ್ಟೋರೆಂಟ್ ಒಂದರ ಆಚೆ ನಿಂತಿದ್ದಾಗ ಶೂಟೌಟ್
  • 2 ತಿಂಗಳ ಹಿಂದಷ್ಟೆ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಕ್ಕೆ ತೆರಳಿದ್ಧ ಶರತ್

ವಾಷಿಂಗ್ಟನ್[ಜು.08]: ಅಪರಿಚಿತನೊಬ್ಬನ ಗುಂಡಿನ ದಾಳಿಗೆ ಭಾರತೀಯ ಮೂಲಕ ಟೆಕ್ಕಿಯೊಬ್ಬ ಮೃತಪಟ್ಟಿರುವ ಘಟನೆ ಅಮೆರಿಕಾದ ಕಾನ್ಸಾನ್ ಪಟ್ಟಣದಲ್ಲಿ ನಡೆದಿದೆ.

ಹೈದರಾಬಾದ್ ಮೂಲದ ಶರತ್ ಕೊಪ್ಪು[26] ಮೃತ ಟೆಕ್ಕಿ. ಕೆಲವೇ ತಿಂಗಳ ಹಿಂದೆ ಅಮೆರಿಕಾಕ್ಕೆ ಆಗಮಿಸಿದ್ದ ಶರತ್  ಮಿಸ್ಸೋರಿ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸ್ಥಳೀಯ ಪೊಲೀಸ್ ವರದಿಯ ಪ್ರಕಾರ ನಿನ್ನೆ ಸಂಜೆ 7 ಗಂಟೆ ಸಮಯದಲ್ಲಿ ಕಾನ್ಸಾನ್ ಪಟ್ಟಣದ ರೆಸ್ಟೋರೆಂಟ್ ಒಂದರ ಆಚೆ ನಿಂತಿದ್ದಾಗ ಅಪರಿಚಿತನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.

ದಾಳಿ ನಡೆಸಿದ ದುಷ್ಕರ್ಮಿಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಶರತ್ ಸಾವಿನ ಬಗ್ಗೆ ಆತನ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು  ಬೇಗನೆ ತಮ್ಮ ವಶಕ್ಕೆ ನೀಡಬೇಕೆಂದು ಶರತ್ ತಂದೆ ಕೆ.ರಾಮ್ ಮೋಹನ್ ಹೈದರಾಬಾದ್  ಪೊಲೀಸ್ ಮಹಾ ನಿರ್ದೇಶಕ ಅವರ ಮೂಲಕ ಅಮೆರಿಕಾದ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. 

ಶರತ್ ಕಪ್ಪು ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಹೈದರಾಬಾದ್ ವಿವಿಯಲ್ಲಿ ಪದವಿ ಪೂರೈಸಿ ಸಾಫ್ಟ್'ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2 ತಿಂಗಳ ಹಿಂದಷ್ಟೆ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಕ್ಕೆ ತೆರಳಿದ್ದರು. 2017ರ ಫೆಬ್ರವರಿಯಲ್ಲಿ  ಭಾರತೀಯ ಮೂಲದ ಶ್ರೀನಿವಾಸ್ ಕೂಚಿಬೋತ್ಲಾ ಎಂಬ ಟೆಕ್ಕಿಯನ್ನು ಗುಂಡಿಕ್ಕಿ ಹತ್ಯೆಗಯ್ಯಲಾಗಿತ್ತು.

loader