ದಶಕಗಳ ಹೈದ್ರಾಬಾದ್ ಕರ್ನಾಟಕದ ಜನರ ಕನಸಿನ ಯೋಜನೆ ಅದು, ನಾಳೆ ಪ್ರಧಾನಿಗಳು ಈ ಯೋಜನೆಗೆ ಚಾಲನೆ ನೀಡಿ.. ಇಲ್ಲಿನ ಜನರ ಬಹುದಿನದ ಕನಸನ್ನು ನನಸಾಗಿಸುತ್ತಿದ್ದಾರೆ. ಆದ್ರೆ, ಇದರ ಹಿಂದೆ ಬಿಜೆಪಿ ವೋಟ್​'ಬ್ಯಾಂಕ್ ರಾಜಕೀಯವಿದಿಯಂತೆ. ಈ ಕುರಿತ ಸ್ಪೆಷಲ್ ರಿಪೋರ್ಟ್​ ಇಲ್ಲಿದೆ ನೋಡಿ

ಬೀದರ್(ಅ.28): ಹೈದ್ರಾಬಾದ್ ಕರ್ನಾಟಕ ಭಾಗದ ಕನಸಿನ ರೈಲು ಯೋಜನೆಗೆ ನಾಳೆ ಹಸಿರು ನಿಶಾನೆ ಸಿಗಲಿದೆ. ಕಲಬುರಗಿ-ಬೀದರ್ ನಡುವಿನ 110 ಕಿಲೋ ಮೀಟರ್ ರೈಲು ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಾರೆ. ಆದರೆ, ಈ ಯೋಜನೆ ಹೆಸರಲ್ಲಿ ಬಿಜೆಪಿ ಓಟ್ ಬ್ಯಾಂಕ್ ರಾಜಕಾರಣ ಮಾಡ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.. ಇದಕ್ಕೆ ಕಾರಣ ಅಮಿತ್ ಶಾ 2014ರ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಈ ಹೇಳಿಕೆ .

ಹೈದ್ರಾಬಾದ್ ಕರ್ನಾಟಕ ಸ್ವತಂತ್ರ ಗೊಳಿಸಲು ಪ್ರಾಣ ತೆತ್ತ ಬಸವಕಲ್ಯಾಣದ ಗೊರ್ಟಾ ಗ್ರಾಮದ ಹುತಾತ್ಮರ ಸ್ಮಾರಕ ನಿರ್ಮಿಸೋ ಭರವಸೆ ನೀಡಿ ಲೋಕಸಭಾ ಚುನಾವಣೆ ವೇಳೆ ಅಮಿತ್ ಶಾ ವೋಟು ಗಿಟ್ಟಿಸಿಕೊಂಡಿದ್ದರಂತೆ.. ಅದಾದ ಬಳಿಕ ಇಲ್ಲಿಂದ ಆಯ್ಕೆಯಾದ ಬಿದರ್ ಸಂಸದ ಭಗವಂತ್ ಖೂಬಾ ತಿರುಗಿಯೂ ನೋಡಿಲ್ಲವಂತೆ. ಅಮಿತ್​ ಶಾ ಅವರಿಗಂತೂ ನೆನೆಪೇ ಇಲ್ಲ. ಈಗ 2018ರ ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದ್ದಹಾಗೇ ರೈಲು ಯೋಜನೆ ನೆನಪಾಗಿದೆ ಅನ್ನೋದು ಸ್ಥಳೀಯರ ಆರೋಪ.

ಪ್ರತಿ ಎಲೆಕ್ಷನ್ ವೇಳೆ ಒಂದೊಂದು ಯೋಜನೆ ಹೆಸರಲ್ಲಿ ಬಿಜೆಪಿ ವೋಟ್​ಬ್ಯಾಂಕ್ ರಾಜಕೀಯ ಮಾಡುತ್ತಿದೆ ಅನ್ನೋದು ಇವರ ಆರೋಪ.. ಅದೇನೆ ಇದ್ರೂ.. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರೈಲು ಮಾರ್ಗಕ್ಕೆ ನಾಳೆ ಉದ್ಘಾಟನೆಯಾಗ್ತಿರೋದು ಖುಷಿಯ ಸಂಗತಿ.