ತಿರುಪತಿ ತಿಮ್ಮಪ್ಪಂಗೆ ಕೋಟಿ ಕಾಣಿಕೆ ಸಲ್ಲಿಸಿದ ಉದ್ಯಮಿ

Hyderabad devotee donates Rs 1 crore to Tirupati temple
Highlights

ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ಸಮಸ್ಯೆ ಎದುರಾಗಿದೆ ಅಂತಾ ಅದರ ನಾಯಕರೆಲ್ಲಾ ತಲೆ ಕೆಡಿಸಿಕೊಂಡು ಕೂತಿದ್ದರೆ, ಇತ್ತ ಭಕ್ತರೊಬ್ಬರು ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಹೈದರಾಬಾದ್ ಮೂಲದ ಉದ್ಯಮಿ ಬಿ. ಕರುಣಾಕರ್ ರೆಡ್ಡಿ ಎಂಬುವರೇ ಟಿಟಿಡಿ ಗೆ ಒಂದು ಕೋಟಿ ರೂ. ದೇಣಿಗೆ ನೀಡಿದವರು.

ಹೈದರಾಬಾದ್ (ಮೇ. 24): ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ಸಮಸ್ಯೆ ಎದುರಾಗಿದೆ ಅಂತಾ ಅದರ ನಾಯಕರೆಲ್ಲಾ ತಲೆ ಕೆಡಿಸಿಕೊಂಡು ಕೂತಿದ್ದರೆ, ಇತ್ತ ಭಕ್ತರೊಬ್ಬರು ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ಕಾಣಿಕೆ ನೀಡಿದ್ದಾರೆ. ಹೈದರಾಬಾದ್ ಮೂಲದ ಉದ್ಯಮಿ ಬಿ. ಕರುಣಾಕರ್ ರೆಡ್ಡಿ ಎಂಬುವರೇ ಟಿಟಿಡಿಗೆ ಒಂದು ಕೋಟಿ ರೂ. ಕಾಣಿಕೆ ನೀಡಿದವರು.

ಕುಟುಂಬ ಸಮೇತ ತಿರುಪತಿ ದೇವಸ್ಥಾನಕ್ಕೆ ಆಗಮಿಸಿದ ರೆಡ್ಡಿ, ಟಿಟಿಡಿ ಯ ಕಾರ್ಯನಿರ್ವಾಹಕ ಅಧಿಕಾರಿ ಕೆಎಸ್ ಶ್ರೀನಿವಾಸ್ ರಾಜು ಅವರಿಗೆ ಒಂದು ಕೋಟಿ ರೂ. ಮೌಲ್ಯದ ಚೆಕ್ ಕಾಣಿಕೆಯಾಗಿ ನೀಡಿದರು. ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು, ಅವರ ಈ ಕಾರ್ಯಕ್ಕೆ ಕೈ ಜೋಡಿಸುತ್ತಿರುವುದಾಗಿ ಕರುಣಾಕರ್ ರೆಡ್ಡಿ ಹೇಳಿದ್ದಾರೆ.

ಇನ್ನು ಕರುಣಾಕರ್ ಅವರ ಸೇವೆ ಶ್ಲಾಘನೀಯ ಎಂದು ಟಿಟಿಡಿ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ. ಕಳೆದ ವಾರವಷ್ಟೇ ವೆಂಕಟೇಶ್ವರುಲು ಎಂಬ ಮತ್ತೋರ್ವ ಉದ್ಯಮಿ ಕೂಡ ಟಿಟಿಡಿಗೆ 1.60 ಕೋಟಿ ರೂ. ದೇಣಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

loader