ಗರೀಬ್ ಅಂತಾರಾಷ್ಟ್ರೀಯ ಸೊಸೈಟಿ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದ ಕೋರ್ಟ್, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ, ಪ್ರಚಾರ ಹಿತಾಸಕ್ತಿ ಅರ್ಜಿ ಎಂದು ಕಿಡಿಕಾರಿದೆ.

ಹೈದರಾಬಾದ್(ಡಿ.20): ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ತೆಲಂಗಾಣದಲ್ಲಿರುವ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಬೇಕೆಂಬ ಸಂಸ್ಥೆಯೊಂದರ ಅರ್ಜಿಯನ್ನು ಹೈದರಾಬಾದ್ ಹೈಕೋರ್ಟ್ ವಜಾ ಮಾಡಿದ್ದು ಮಾತ್ರವಲ್ಲದೇ, ಸಂಸ್ಥೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಗರೀಬ್ ಅಂತಾರಾಷ್ಟ್ರೀಯ ಸೊಸೈಟಿ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದ ಕೋರ್ಟ್, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ, ಪ್ರಚಾರ ಹಿತಾಸಕ್ತಿ ಅರ್ಜಿ ಎಂದು ಕಿಡಿಕಾರಿದೆ. ಅಲ್ಲದೇ 4 ವಾರಗಳೊಳಗೆ ಒಂದು ಲಕ್ಷ ರೂಪಾಯಿ ದಂಡ ಪಾವತಿಸಬೇಕೆಂದೂ ಆದೇಶಿಸಿದೆ.

ದ್ರಾಕ್ಷಿ ತೋಟ, ಕೃಷಿ ಭೂಮಿ ಮತ್ತು 14.5 ಕೋಟಿ ಮೌಲ್ಯದ ವಾಣಿಜ್ಯಿಕ ಪ್ರದೇಶ ಜಯಾ ಅವರ ಹೆಸರಿನಲ್ಲಿದೆ. ಇದೇ ವೇಳೆ, ಜಯಾ ಆರೋಗ್ಯದ ಬಗ್ಗೆ ಆಸ್ಫತ್ರೆಯಲ್ಲಿ ನೀಡಿದ ಚಿಕಿತ್ಸೆ ಬಗ್ಗೆ ಮಾಹಿತಿ ಬಹಿರಂಗ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಚೆನ್ನೈ ಕೋರ್ಟ್ ವಜಾ ಮಾಡಿದೆ.