ಹೈದರಾಬಾದ್[ಡಿ.02]: ಅನಾಥ ಮಗುವೊಂದಕ್ಕೆ ಬೆಂಗಳೂರಿನ ಮಹಿಳಾ ಪೇದೆಯೊಬ್ಬರು ಎದೆಹಾಲು ಕುಡಿಸಿದ ಘಟನೆಯ ಮಾದರಿಯಲ್ಲೇ ಹೈದರಾಬಾದ್‌ನಲ್ಲಿ ಮಹಿಳಾ ಪೇದೆಯೊಬ್ಬರು ಇಂಥದ್ದೇ ಮಾನವೀಯತೆ ಮೆರೆದಿದ್ದಾರೆ.

ಕುಡಿದ ಮತ್ತಿನಲ್ಲಿ ತಾಯಿಯೊಬ್ಬಳು ತನ್ನ 18 ತಿಂಗಳ ಕಂದನನ್ನು ಬಿಟ್ಟು ಹೋಗಿದ್ದಳು. ಬಳಿಕ ಮಗು ವಿಪರೀತ ಅಳುತ್ತಿತ್ತು. ಹೆರಿಗೆ ರಜೆಯ ಮೇಲಿದ್ದ ಮಹಿಳಾ ಪೇದೆ ಪ್ರಿಯಾಂಕಾಗೆ ಅದೇ ಫ್ಜಲ್‌ಗಂಜ್‌ ಠಾಣೆಯಲ್ಲಿ ಪೇದೆಯಾಗಿರುವ ಪತಿಯು ಈ ವಿಷಯ ತಿಳಿಸಿದರು.

ಪ್ರಿಯಾಂಕಾ ಕೂಡಲೇ ಮನೆಯಿಂದ ಬಂದು ಅಳುತ್ತಿದ್ದ ಮಗುವಿನ ನೋವನ್ನು ಅರ್ಥ ಮಾಡಿಕೊಂಡು ಎದೆಹಾಲು ಕುಡಿಸಿ ಶಾಂತ ಮಾಡಿದರು. ಬಳಿಕ ಆಸ್ಪತ್ರೆಗೆ ದಾಖಲಿಸಿದರು.