ಬಿಸಿ-ತಂಪು ಪಾನೀಯ ಬಳಕೆ ನಂತರ ಈ ಕಪ್‌ ತಿನ್ನಬಹುದು!| ತಿನ್ನಬಹುದಾದ ಕಪ್‌ ತಯಾರಿಸಿದ ಹೈದ್ರಾಬಾದ್‌ ಕಂಪನಿ

ಹೈದ್ರಾಬಾದ್‌[ಅ.19]: ಪರಿಸರ ಸ್ನೇಹಿ ವಸ್ತುಗಳ ಉತ್ಪಾದನೆಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಹೈದ್ರಾಬಾದ್‌ ಮೂಲದ ಕಂಪನಿಯೊಂದು ‘ತಿನ್ನಬಹುದಾದ ಕಪ್‌’ ಅನ್ನು ಆವಿಷ್ಕರಿಸಿದೆ. ಈ ಕಪ್‌ನಲ್ಲಿ ಬಿಸಿ ಹಾಗೂ ತಂಪು ಪಾನೀಯ ಕುಡಿದ ಬಳಿಕ ಕಪ್‌ ಅನ್ನೇ ತಿನ್ನಬಹುದು.

ನೈಸರ್ಗಿಕ ಧಾನ್ಯಗಳಿಂದ ತಯಾರಿಸಿದ ಖಾದ್ಯದ ಲೋಟಕ್ಕೆ ‘ಈಟಿಂಗ್‌ ಕಪ್‌’ ಎಂದು ಹೆಸರಿಸಲಾಗಿದೆ. ಈ ಲೋಟವು ಬಿಸಿ ಮತ್ತು ತಂಪಾದ ಯಾವುದೇ ಪಾನೀಯವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ನಿಸರ್ಗದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಪ್ಲಾಸ್ಟಿಕ್‌ ಮತ್ತು ಪೇಪರ್‌ ಕಪ್‌ಗಳಿಗೆ ಪರ್ಯಾಯವಾಗಿ ಈ ಕಪ್‌ ತಯಾರಿಸಲಾಗಿದೆ. ಇದರ ಬಳಕೆಯ ನಂತರ ತಿನ್ನಬಹುದಾದ್ದರಿಂದ ಇದು ಪರಿಸರ ಸ್ನೇಹಿಯಾಗಿದೆ. ಇದರಲ್ಲಿ ಸೂಫ್ಸ್‌, ಸಿಹಿತಿಂಡಿ, ಮೊಸರು ಮತ್ತಿತರ ಆಹಾರ ಖಾದ್ಯಗಳನ್ನು 40 ನಿಮಿಷಗಳವರೆಗೆ ಇಟ್ಟರೂ ಹಿಡಿದಿಡುವ ಸಾಮರ್ಥ್ಯವಿದೆ.

Scroll to load tweet…

ಇದರಲ್ಲಿಡುವುದರಿಂದ ಖಾದ್ಯದ ಬಣ್ಣ ಮತ್ತು ರುಚಿ ಬದಲಾಗುವುದಿಲ್ಲ ಎಂದು ಕಂಪನಿಯ ಕಾರ್ಯಕಾರಿ ನಿರ್ದೇಶಕ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.