ಹೈದ್ರಾಬಾದ್ [ಜೂ.17] :  ಗ್ರಾಹಕನ ಜೊತೆಗೆ ಸೆಕ್ಸ್ ಗೆ ಒಪ್ಪದ ಬಾರ್ ಡ್ಯಾನ್ಸರ್ ಮೇಲೆ ಮನ ಬಂದಂತೆ ಥಳಿಸಿದ ನಾಲ್ವರನ್ನು ಬಂಧಿಸಿದ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ.

ಹೈದ್ರಾಬಾದ್ ನ ಬೇಗಮ್ ಪೇಟೆಯಲ್ಲಿರುವ ಪ್ರಸಿದ್ಧ ಬಾರ್ ಒಂದರಲ್ಲೇ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. 

ಬಾರ್ ಡ್ಯಾನ್ಸರ್ ಆಗಿ ಕೆಲ ತಿಂಗಳ ಹಿಂದೆ ಇಲ್ಲಿ ಸೇರಿಕೊಂಡ ಯುವತಿಗೆ ಕೆಲ ದಿನಗಳ ಬಳಿಕ ಹಿಂಸಿಸಲು ಆರಂಭಿಸಿದ್ದರು. ಬಾರ್ಗೆ ಬಂದ ಗ್ರಾಹಕರ ಜೊತೆಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಲಾಗುತಿತ್ತು. ಆದರೆ ಇದಕ್ಕೆ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಅಲ್ಲಿರುವ ಸಿಬ್ಬಂದಿ ಮನ ಬಂದಂತೆ ಥಳಿಸಿದ್ದಾರೆ.

ಈ ಸಂಬಂಧ ನಾಲ್ವರ ವಿರುದ್ಧ ಸೆಕ್ಷನ್ 354[ಥಳಿತ],  509[ಅವಮಾನ] ಸೇರಿದಂತೆ ವಿವಿಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಅಲ್ಲದೇ ಪ್ರಕರಣ ಸಂಬಮಧ ಹೆಚ್ಚಿನ ತನಿಖೆ ಜವಾಬ್ದಾರಿಯನ್ನು ಪಂಜಗುಟ್ಟಾ ಪೊಲೀಸರಿಗೆ ವಹಿಸಲಾಗಿದೆ.