ಹೈದರಾಬಾದ್’ನ ಈ 12 ವರ್ಷದ ಬಾಲಕ ಜವಾಬ್ದಾರಿ ಏನೆಂಬುವುದನ್ನು ಇಡಿಯ ದೇಶಕ್ಕೆ ತೋರಿಸಿಕೊಟ್ಟಿದ್ದಾನೆ. ಇತ್ತೀಚೆಗೆ ನಗರದ ಹಬ್ಸಿಗುಡಾ ರಸ್ತೆಯಲ್ಲಿರುವ ಹೊಂಡದಿಂದಾಗಿ ಅಪಘಾತವೊಂದು  ಸಂಭವಿಸಿ ಮಗುವೊಂದು ಮೃತಪಟ್ಟಿತ್ತು. ಈ ಘಟನೆಯಿಂದ ನೊಂದ ಬಾಲಕ ರವಿ ತೇಜ ರಸ್ತೆ ಗುಂಡಿಗಳನ್ನು ಮುಚ್ಚಿ ಎಲ್ಲರಿಗೂ ಮಾದರಿಯಾಗಿದ್ದಾನೆ.

ಹೈದರಾಬಾದ್: ಹೈದರಾಬಾದ್’ನ ಈ 12 ವರ್ಷದ ಬಾಲಕ ಜವಾಬ್ದಾರಿ ಏನೆಂಬುವುದನ್ನು ಇಡಿಯ ದೇಶಕ್ಕೆ ತೋರಿಸಿಕೊಟ್ಟಿದ್ದಾನೆ.

ಇತ್ತೀಚೆಗೆ ನಗರದ ಹಬ್ಸಿಗುಡಾ ರಸ್ತೆಯಲ್ಲಿರುವ ಹೊಂಡದಿಂದಾಗಿ ಅಪಘಾತವೊಂದು ಸಂಭವಿಸಿ ಮಗುವೊಂದು ಮೃತಪಟ್ಟಿತ್ತು. ಈ ಘಟನೆಯಿಂದ ನೊಂದ ಬಾಲಕ ರವಿ ತೇಜ ರಸ್ತೆ ಗುಂಡಿಗಳನ್ನು ಮುಚ್ಚಿ ಎಲ್ಲರಿಗೂ ಮಾದರಿಯಾಗಿದ್ದಾನೆ.

ರಸ್ತೆಹೊಂಡಗಳಿಂದಾಗಿ ಬೈಕೊಂದು ಇತ್ತೀಚೆಗೆ ಅಪಘಾತಕ್ಕೊಳಗಾಗಿ ಆದರಲ್ಲಿದ್ದ 6 ತಿಂಗಳ ಮಗುವೊಂದು ಮೃತಪಟ್ಟಿತ್ತು. ಇನ್ಮುಂದೆ ಈ ರೀತಿ ಯಾರು ಸಾಯಬಾರದು. ಅದಕ್ಕಾಗಿ ನಾನು ರಸ್ತೆಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ಕೈ ಹಾಕಿದ್ದೇನೆ, ಎಂದು ರವಿ ತೇಜ ಹೇಳಿದ್ದಾನೆ.

5ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವ ರವಿ ತೇಜ ಭಾನುವಾರ ಗಂಟೆಗಟ್ಟಲೆಗಳ ಕಾಲ ಬಿಸಿಲು, ಟ್ರಾಫಿಕ್, ಧೂಳನ್ನು ಲೆಕ್ಕಿಸದೇ ರಸ್ತೆಹೊಂಡಗಳನ್ನು ಮುಚ್ಚುವ ಕೆಲಸದಲ್ಲಿ ನಿರತನಾಗಿದ್ದನು.

ಬಾಲಕನ ಈ ಕ್ರಮ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆಯಲ್ಲದೆ, ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಮಾಡಿದೆ.

ಫೋಟೋ ಕೃಪೆ: ಏಎನ್’ಐ