ಸುದ್ದಿಗಾರರೊಂದಿಗೆ ಅಂದು ಆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಮೇಟಿ, ಅವರೇನೂ ತಪ್ಪು ಮಾಡಿಲ್ಲವಲ್ಲ ಎಂದು ಪ್ರಶ್ನಿಸಿದ್ದರು.
ಬೆಂಗಳೂರು(ಡಿ. 14): ಕಳೆದ ತಿಂಗಳು ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮದ ವೇಳೆ ಸಚಿವ ತನ್ವೀರ್ ಸೇಠ್ ತಮ್ಮ ಮೊಬೈಲ್'ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದಿತ್ತು. ಆ ಸಂದರ್ಭದಲ್ಲಿ ತನ್ವೀರ್ ಸೇಠ್ ವರ್ತನೆಯನ್ನು ಇದೇ ಹೆಚ್.ವೈ.ಮೇಟಿ ಸಮರ್ಥಿಸಿಕೊಂಡಿದ್ದರು. ಸುದ್ದಿಗಾರರೊಂದಿಗೆ ಅಂದು ಆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಮೇಟಿ, ಅವರೇನೂ ತಪ್ಪು ಮಾಡಿಲ್ಲವಲ್ಲ ಎಂದು ಪ್ರಶ್ನಿಸಿದ್ದರು.
"ಮೊಬೈಲ್'ನಲ್ಲಿ ಫೋಟೋ ವೀಕ್ಷಿಸೋದರಲ್ಲಿ ತಪ್ಪೇನಿದೆ? ಮೊಬೈಲ್'ಗೆ ಬಂದ ಫೋಟೋವನ್ನು ಅವರು ಹಾಗೇ ನೋಡಿಕೊಂಡು ಹೋಗಿದ್ದಾರೆ. ಅದನ್ನೇ ನೋಡಬೇಕೆಂದು ಅವರು ನೋಡಿದ್ದಲ್ಲ. ಇಂಥ ವಿಚಾರವನ್ನು ಹೀಗೆ ತೋರಿಸೋದು ತಪ್ಪು" ಎಂದು ಮಾಧ್ಯಮದವರನ್ನೇ ತರಾಟೆಗೆ ತೆಗೆದುಕೊಂಡಿದ್ದರು.
