ರಾಸಲೀಲೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಶಾಸಕ ಎಚ್.ವೈ ಮೇಟಿ ಕರಾವಳಿ ದೈವಗಳ ಮೊರೆ ಹೋಗಿದ್ದಾರೆ. ರಾಸಲೀಲೆ ಪ್ರಕರಣದಲ್ಲಿ ನನಗೆ ಅನ್ಯಾಯವಾಗಿದೆ ಎಂದು ತುಳುನಾಡ ದೈವಗಳಿಗೆ ದೂರು ಕೊಟ್ಟಿದ್ದಾರೆ.

ಉಡುಪಿ(ಸೆ.18): ರಾಸಲೀಲೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಶಾಸಕ ಎಚ್.ವೈ ಮೇಟಿ ಕರಾವಳಿ ದೈವಗಳ ಮೊರೆ ಹೋಗಿದ್ದಾರೆ. ರಾಸಲೀಲೆ ಪ್ರಕರಣದಲ್ಲಿ ನನಗೆ ಅನ್ಯಾಯವಾಗಿದೆ ಎಂದು ತುಳುನಾಡ ದೈವಗಳಿಗೆ ದೂರು ಕೊಟ್ಟಿದ್ದಾರೆ.

ಉಡುಪಿಯ ಬಾರ್ಕೂರಿನಲ್ಲಿರುವ ಮಹಾಸಂಸ್ಥಾನಕ್ಕೆ ಬೇಟಿ ನೀಡಿದ್ದ ಮೇಟಿ ಸಂತೋಷ ಗುರೂಜಿಯನ್ನು ಭೇಟಿಯಾದ್ರು. ಅವರ ಸಲಹೆಯಂತೆ ಕುಂಡೋದರ ದೈವದ ಸನ್ನಿಧಿಯಲ್ಲಿ ದೂರು ಕೊಟ್ಟು ಗಂಟೆ ಬಾರಿಸಿದರು.

ಬಳಿಕ ಸುವರ್ಣ ನ್ಯೂಸ್ ಜೊತೆ ಮಾತನಾಡಿ, ನಾನು ಸ್ವಾಮೀಜಿಯ ಭೇಟಿಗೆ ಬಂದಿದ್ದೇನೆ, ಇಲ್ಲಿನ ದೈವಗಳಿಗೆ ಪೂಜೆ ಸಲ್ಲಿಸಿದ್ದೇನೆ ಎಂದಿದ್ದಾರೆ.