ರಾಜ್ಯದ ಸಚಿವರ ಹರಗರಣಗಳ ಪಟ್ಟಿ ದಿನಕ್ಕೊಂದರಂತೆ ಜನರೆದುರು ತೆರೆದುಕೊಳ್ಳುತ್ತಿದೆ. ಸದ್ಯಕ್ಕೀಗ ಸಿಎಂ ಸಿದ್ಧರಾಮಯ್ಯರವರ ಆಪ್ತ ಸಚಿವ ಎಚ್ ವೈ ಮೇಟಿಯವರ ಸೆಕ್ಸ್ ಸ್ಕ್ಯಾಂಡಲ್ ಪ್ರಕರಣ ಬೆಳಕಿಗೆ ಬಂದಿದೆ. ಈ ರಾಸಲೀಲೆಯ ಸಿಡಿ ಬಿಡುಗಡೆ ಮಾಡದಂತೆ ಸಚಿವರು RTI ಕಾರ್ಯಕರ್ತನಿಗೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರು(ಡಿ.11): ರಾಜ್ಯದ ಸಚಿವರ ಹರಗರಣಗಳ ಪಟ್ಟಿ ದಿನಕ್ಕೊಂದರಂತೆ ಜನರೆದುರು ತೆರೆದುಕೊಳ್ಳುತ್ತಿದೆ. ಸದ್ಯಕ್ಕೀಗ ಸಿಎಂ ಸಿದ್ಧರಾಮಯ್ಯರವರ ಆಪ್ತ ಸಚಿವ ಎಚ್ ವೈ ಮೇಟಿಯವರ ಸೆಕ್ಸ್ ಸ್ಕ್ಯಾಂಡಲ್ ಪ್ರಕರಣ ಬೆಳಕಿಗೆ ಬಂದಿದೆ. ಈ ರಾಸಲೀಲೆಯ ಸಿಡಿ ಬಿಡುಗಡೆ ಮಾಡದಂತೆ ಸಚಿವರು RTI ಕಾರ್ಯಕರ್ತನಿಗೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮೂಲತಃ ಬಳ್ಳಾರಿಯವರಾಗಿರುವ RTI ಕಾರ್ಯಕರ್ತ ರಾಜ್'ಶೇಖರ್ ಎಂಬವರ ಬಳಿ ಸಚಿವರ ರಾಸಲೀಲೆಯ ಸಿಡಿ ಇದೆ ಎಂದು ತಿಳಿದು ಬಂದಿದ್ದು, ಈ ಸಿಡಿ ಬಿಡುಗಡೆಗೊಳಿಸದಿರುವಂತೆ ಅಬಕಾರಿ ಸಚಿವ ಎಚ್ ವೈ ಮೇಟಿ ಬೆಂಬಲಿಗರು ಧಮ್ಕಿ ಹಾಕಿದ್ದಾರೆ. ಸಿಡಿ ಬಿಡುಗಡೆ ಮಾಡಿದರೆ ನಿನಗೆ ಹಾಗೂ ನಿನ್ನ ಕುಟುಂಬಕ್ಕೆ ಕಂಟಕ ಎಂದು RTI ಕಾರ್ಯಕರ್ತ ರಾಜ್'ಶೇಖರ್'ಗೆ ಜೀವ ಬೆದರಿಕೆ ಒಡ್ಡಿರುವ ಆಡಿಯೋ ಕೂಡಾ ಕೂಡಾ ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.
ಭಾರೀ ಕುತೂಹಲ ಮೂಡಿಸಿರುವ ಈ ಸೆಕ್ಸ್ ಸ್ಕ್ಯಾಂಡಲ್ ಪ್ರಕರಣಕ್ಕೆ ಸಂಭಂದಿಸಿದಂತೆ ಸದ್ಯ ಸುವರ್ಣ ನ್ಯೂಸ್'ಗೆ ಲಭ್ಯವಾಗಿರುವ ಆ ಆಡಿಯೋದಲ್ಲಿ ಮಾತನಾಡಿರುವ ಬೆಂಬಲಿಗ ಅಬಕಾರಿ ಸಚಿವ ಎಚ್. ವೈ ಮೇಟಿ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ 'ಬೇಕಾದರೆ ಹಣ ತೆಗೆದುಕೊಳ್ಳಿ ಆದರೆ ಸಿಡಿಯನ್ನು ಮಾತ್ರ ಬಿಡುಗಡೆಗೊಳಿಸಬೇಡಿ. ಹೀಗೆ ಮಾಡಿದರೆ ನಿಮಗೆ ಹಾಗೂ ನಿಮ್ಮ ಮನೆಯವರಿಗೆ ಚೆನ್ನಾಗಿರಲ್ಲ' ಎಂದು ಆವಾಜ್ ಹಾಕಿದ್ದಾನೆ.
ಇವೆಲ್ಲದರ ಬಳಿಕ ಕಾರ್ಯಕರ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲೂ ಅಡ್ಡಗಟ್ಟಿದ ಸಚಿವರ ಬೆಂಬಲಿಗರು 'ಏನಪ್ಪಾ ನೀನಾ ರಾಜ್'ಶೇಕರ್, ನಮ್ಮ ಮಿನಿಸ್ಟರ್ ಎಚ್.ವೈ. ಮೇಟಿ ಬಗ್ಗೆ ಏನು ಸಾಕ್ಷಿ ಇದೆ? ಅದನ್ನು ಇಟ್ಟುಕೊಂಡು ಬೆದರಿಕೆ ಹಾಕ್ತೀಯಾ?. ನೋಡಪ್ಪಾ ನಮ್ಮ ಮಿನಿಸ್ಟರ್'ಗೆ ತೊಂದರೆಯಾದ್ರೆ ನಿಮ್ಮ ಕುಟುಂಬಕ್ಕೇ ತೊಂದರೆ. ಅವರೇನೋ ಮಾಡಿರ್ತಾರೆ. ಅದನ್ನು ರಿಲೀಸ್ ಮಾಡಿದ್ರೆ ನಿನಗೇನು ಬರುತ್ತೆ?' ಎಂದು ಧಮ್ಕಿ ಹಾಕಿದ್ದಾರೆ.
ಘಟನೆಯ ವಿವರ
ಸದ್ಯ ತಿಳಿದು ಬಂದಿರುವ ಮಾಹಿತಿಯನ್ವಯ ಈ ಕಾಮಕಾಂಡ ಶಕ್ತಿಶೌಧದಲ್ಲೇ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ. ತನ್ನ ವರ್ಗಾವಣೆಯ ಕುರಿತಾಗಿ ಸಚಿವ ಮೇಟಿ ಬಳಿ ಆ ಮಹಿಳೆ ಮಾತನಾಡಲು ಬಂದಿದ್ದು, ಈ ವೇಳೆ ಸಚಿವರ ಅಧಿಕಾರದ ದಾಹಕ್ಕೆ ಮಹಿಳೆ ಬಲಿಯಾಗಿದ್ದಾಳೆ. ಸಚಿವರ ಈ ಕುಕೃತ್ಯದ ವಿಡಿಯೋ ಅವರ ಗನ್'ಮ್ಯಾನ್ ಕೈ ತಲುಪಿತ್ತು. ಇದನ್ನೇ ಇಟ್ಟುಕೊಂಡು ಆತ ಸಚ್ವರಿಗೆ ಬೆದರಿಕೆ ಒಡ್ಡಲಾರಂಭಿಸಿದ್ದ. ಬಳಿಕ ಈ ವಿಡಿಯೋ RTI ಕಾರ್ಯಕರ್ತನ ಕೈ ತಲುಪಿದ್ದು ಅವರಿಗೂ ಬೆಂಬಲಿಗರು ಬೆದರಿಕೆ ಒಡ್ಡಲಾರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
