ಹೆಂಡತಿ ಎಂದರೆ ನಂಗೆ ಭಯ; ಕೋರ್ಟ್'ನಲ್ಲಿ ಅಳಲು ತೋಡಿಕೊಂಡ ಪತಿ ಮಹಾಶಯ

First Published 29, Jan 2018, 3:06 PM IST
Husband  Wife Funny Incident in High Court
Highlights

"ನನಗೆ ನನ್ನ ಹೆಂಡತಿ ಎಂದರೆ ಭಯ ಸ್ವಾಮಿ.." ಹೀಗಂತ  ಪತಿ ಮಹಾಶಯನೊಬ್ಬ ಹೈಕೋರ್ಟ್ ಜಡ್ಜ್ ಮುಂದೆ ಅಳಲು ತೋಡಿಕೊಂಡಿರುವ ಮಜವಾದ ಪ್ರಸಂಗ ನಡೆದಿದೆ.

ಬೆಂಗಳೂರು (ಜ.29): "ನನಗೆ ನನ್ನ ಹೆಂಡತಿ ಎಂದರೆ ಭಯ ಸ್ವಾಮಿ.." ಹೀಗಂತ  ಪತಿ ಮಹಾಶಯನೊಬ್ಬ ಹೈಕೋರ್ಟ್ ಜಡ್ಜ್ ಮುಂದೆ ಅಳಲು ತೋಡಿಕೊಂಡಿರುವ ಮಜವಾದ ಪ್ರಸಂಗ ನಡೆದಿದೆ.

ನನ್ನ ಹೆಂಡತಿ ಅಂದರೆ ನನಗೆ ಭಯ.  ನನಗೆ ಡೈವೊರ್ಸ್ ಕೊಡಬೇಕೆಂದು ಗಂಡ ಹೈಕೋರ್ಟ್ ಏಕಸದಸ್ಯ ಪೀಠ ಬಳಿ ಮನವಿ ಮಾಡಿದ್ದಾನೆ.  

ನೀವಿಬ್ಬರೂ ಸ್ವಲ್ಪ ಹೊತ್ತು ಮಾತನಾಡಿ ಎಂದು ಹೈಕೋರ್ಟ್ ಸೂಚಿಸಿದಾಗ ನಾನು ಅವಳ ಜತೆಗೆ ಹೋಗಲ್ಲ ಎಂದು ಆತ ಹೇಳಿದ್ದಾನೆ.  ಕಬ್ಬನ್ ಪಾರ್ಕ್'ಗೆ ಹೋಗಿ ಮಾತನಾಡಿ ಎಂದು  ಕೋರ್ಟ್ ಸೂಚಿಸಿದಾಗ ಭಯದಿಂದ ಈತ ಒಲ್ಲೆ ಎಂದಿದ್ದಾನೆ.

ಬೆಂಗಳೂರು ವಾಸಿಗಳಾಗಿರುವ ಗಂಡ-ಹೆಂಡತಿ ವಿಚಿತ್ರ ಪ್ರಸಂಗಕ್ಕೆ ಹೈಕೋರ್ಟ್ ಸಾಕ್ಷಿಯಾಗಿದೆ. ನ್ಯಾಯಮೂರ್ತಿ K.N.ಫಣೀಂದ್ರ ಅವರು ಅರ್ಜಿ ವಿಚಾರಣೆ ನಡೆಸಿದ್ದಾರೆ.

ನನಗೆ ನನ್ನ ಹೆಂಡತಿ ಅಂದರೆ ಭಯ ಆಗುತ್ತೆ .ನಾನು ಇಲ್ಲಿಯೇ ಮಾತನಾಡುತ್ತೇನೆ ಎಂದು ಭಯ ಬಿದ್ದ ಗಂಡನ ಹೆದರಿಕೆ ಕಂಡು ನ್ಯಾಯಾಧೀಶರಿಗೇ ಆಶ್ಚರ್ಯವಾಗಿದೆ. ಕೋರ್ಟ್ ಕಾರಿಡಾರ್'ನಲ್ಲೇ ಮಾತನಾಡಲು ಜಸ್ಟೀಸ್ ಸೂಚಿಸಿದ್ದಾರೆ.

ಪೊಲೀಸ್ ಕಾವಲಿನಲ್ಲಿಯೇ ಕೋರ್ಟ್ ಕಾರಿಡಾರ್'ನಲ್ಲೇ ಮಾತನಾಡಲು ನ್ಯಾಯಾಧೀಶರು ಸೂಚಿಸಿದ್ದು ಪರಸ್ಪರ ಮಾತನಾಡಿಕೊಂಡು ನಿರ್ಧಾರ ತಿಳಿಸಲು ಹೇಳಿದ್ದಾರೆ.  4 ಗಂಟೆಗೆ ಪ್ರಕರಣದ ಕುರಿತು ವಿಚಾರಣೆ ನಡೆಯಲಿದೆ.

 

loader