ಮದುವೆ ಸಮಯದಲ್ಲಿ ಕೊಟ್ಟಿದ್ದ ಲಕ್ಷ, ಲಕ್ಷ ವರದಕ್ಷಿಣೆ. ಆದರೂ, ಗಂಡ ಮತ್ತು ಅತ್ತೆ, ಮಾನವ ಹಣದ ಆಸೆ ಇನ್ನೂ ಮುಗಿದಿಲ್ಲ. ಹೆಂಡ್ತಿ ಕೊಟ್ಟ ವರದಕ್ಷಿಣೆ ದುಡ್ಡಿನಲ್ಲೇ ಭವ್ಯ ಬಂಗಲೆ ಕಟ್ಟಿಸಿಕೊಂಡಿರುವ ಗಂಡ, ಈಗ ಪತ್ನಿಯನ್ನೇ ಮನೆಯಿಂದ ಹೊರಗಟ್ಟಿದ್ದಾನೆ. ಕಂಗಾಲಾದ ಪತ್ನಿ, ಕಳೆದ 15 ದಿನಗಳಿಂದ ಮನೆ ಬಾಗಿಲಲ್ಲೇ ಕಾಯುತ್ತಿದ್ದಾರೆ. ಈ ಘಟನೆ ನಡೆದಿರುವುದು ಶಿವಮೊಗ್ಗದಲ್ಲಿ.

ಶಿವಮೊಗ್ಗ(ಜೂ.20): ಮದುವೆ ಸಮಯದಲ್ಲಿ ಕೊಟ್ಟಿದ್ದ ಲಕ್ಷ, ಲಕ್ಷ ವರದಕ್ಷಿಣೆ. ಆದರೂ, ಗಂಡ ಮತ್ತು ಅತ್ತೆ, ಮಾನವ ಹಣದ ಆಸೆ ಇನ್ನೂ ಮುಗಿದಿಲ್ಲ. ಹೆಂಡ್ತಿ ಕೊಟ್ಟ ವರದಕ್ಷಿಣೆ ದುಡ್ಡಿನಲ್ಲೇ ಭವ್ಯ ಬಂಗಲೆ ಕಟ್ಟಿಸಿಕೊಂಡಿರುವ ಗಂಡ, ಈಗ ಪತ್ನಿಯನ್ನೇ ಮನೆಯಿಂದ ಹೊರಗಟ್ಟಿದ್ದಾನೆ. ಕಂಗಾಲಾದ ಪತ್ನಿ, ಕಳೆದ 15 ದಿನಗಳಿಂದ ಮನೆ ಬಾಗಿಲಲ್ಲೇ ಕಾಯುತ್ತಿದ್ದಾರೆ. ಈ ಘಟನೆ ನಡೆದಿರುವುದು ಶಿವಮೊಗ್ಗದಲ್ಲಿ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಸರ್ಕಾರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೇಷ್ಟು ಕಮ್ ವಾರ್ಡನ್ ಅಗಿರುವ ಸತೀಶ್​ ದುಡ್ಡು ಬಾಕ ಗಂಡ. ಶಿಕಾರಿಪುರ ತಾಲ್ಲೂಕಿನ ಹಿರೇಕೊರಲಹಳ್ಳಿ ಗ್ರಾಮದ ಎಂಎ ಪಧವಿಧರೆ ರೇಖಾ ಜತೆ ವರ್ಷದ ಹಿಂದ ಮದುವೆಯಾಗಿತ್ತು. 15 ತೊಲ ಬಂಗಾರ, 5 ಲಕ್ಷ ನಗದನ್ನು ವರದಕ್ಷಿಣೆಯಾಗಿ ಕೊಟ್ಟಿದ್ದರು. ಆದ್ರೆ, ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಕಂಗೆಟ್ಟಿದ್ದರೂ ಮಗಳ ಸಂಸಾರ ಸುಖವಾಗಿರಲೆಂದು ಮತ್ತೆ 2 ಏಕರೆ ಹೊಲ ಮಾರಿ 15 ಲಕ್ಷ ಹಣ ನೀಡಿದ್ದರು. ಈ ಹಣದಲ್ಲಿ ಅಮ್ಮನ ಮಡಿಲು ಹೆಸರಿನ ಭವ್ಯ ಬಂಗಲೆಯೇನೋ ಸಿದ್ದವಾಯಿತು ಆದರೆ ಪತ್ನಿ ರೇಖಾಳಿಗೆ ಮಾತ್ರ ಚಿತ್ರಹಿಂಸೆ ಶುರುವಾಗಿತ್ತು

ಮದುವೆಯಾದ ಹೊಸದರಲ್ಲಿ ಮೂಡಿಗೆರೆಯಲ್ಲಿ ಸಂಸಾರ ಶುರುವಿಟ್ಟು ಕೊಂಡಿದ್ದ ಸತೀಶ, ನಾಲ್ಕೆ ತಿಂಗಳಿಗೆ ಶಿವಮೊಗ್ಗಕ್ಕೆ ಕರೆದು ತಂದು ಬಿಟ್ಟಿದ್ದ. ರಾತ್ರಿಯೆಲ್ಲಾ ಯಾವುದೋ ಹೆಣ್ಣಿನ ಜೊತೆ ಮಾತನಾಡಿದ್ದನ್ನು ಪತ್ನಿ ಪ್ರಶ್ನಿಸಿದ್ದೇ ವಿರಸಕ್ಕೆ ಕಾರಣವಾಗಿತ್ತು. ತಂದೆಗೆ ಹುಷಾರಿಲ್ಲವೆಂದು ತವರಿಗೆ ಹೋಗಿದ್ದ ರೇಖಾಳನ್ನು ಮತ್ತೆ ಮನೆಗೆ ಸೇರಿಸಿಕೊಳ್ಳಲು ಪತಿರಾಯ ಒಪ್ಪಲೇ ಇಲ್ಲ. ಇದಕ್ಕೆ ಅತ್ತೆ, ಮಾವನ ಸಾಥ್ ಬೇರೆ. ಕಂಗೆಟ್ಟ ರೇಖಾ,ಪೋಷಕರಿಗೆ ವಿಷಯ ತಿಳಿಸಿದ್ರು. ಗ್ರಾಮಸ್ಥರೇ ರಾಜಿ ಪಂಚಾಯಿತಿಗೆ ಬಂದರೂ ಬಾಗಿಲು ತೆರೆಯಲೇ ಇಲ್ಲ ಮನೆಯ ಕಿಟಕಿಯಿಂದಲೇ ಬಾಯಿಗೆ ಬಂದಂತೆ ಬೈಯ್ದ ಅತ್ತೆ ಅವಳ್ಯಾರೋ ಗೊತ್ತಿಲ್ಲ ಎಂದು ಬಿಟ್ಟಿದ್ದಳು. ಪೊಲಿಸರಿಗೆ ದೂರು ಕೊಟ್ರೂ ಡೋಂಟ್ ಕೇರ್ ಅನ್ನುತ್ತಿದ್ದಾರೆ ಸತೀಶ್ ಪೋಷಕರು.