ಪತ್ನಿಯನ್ನು ಕೊಲ್ಲಲು ಯತ್ನಿಸಿ ಗಾಬರಿಗೊಂಡು ಪತಿ ಆತ್ಮಹತ್ಯೆ

First Published 12, Jan 2018, 8:14 PM IST
Husband Suicide after beat Wife
Highlights

ಚಾಕುವಿನಿಂದ ಹಲ್ಲೆಗೊಳಗಾಗಿರುವ ಪತ್ನಿ ಚಿತ್ರಾ  ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಆಟೋ ಚಾಲಕ ಪತಿ ಹೆನ್ರಿ ಫರ್ನಾಂಡಿಸ್ (35) ಮೃತಪಟ್ಟಿದ್ದಾನೆ.

ಬೆಂಗಳೂರು(ಜ.12): ಪತ್ನಿಯ ಶೀಲ‌ ಶಂಕಿಸಿ ಕೊಲ್ಲಲು ಯತ್ನಿಸಿದ ವ್ಯಕ್ತಿಯೊಬ್ಬ ಗಾಬರಿಗೊಂಡು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.

ಚಾಕುವಿನಿಂದ ಹಲ್ಲೆಗೊಳಗಾಗಿರುವ ಪತ್ನಿ ಚಿತ್ರಾ  ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಆಟೋ ಚಾಲಕ ಪತಿ ಹೆನ್ರಿ ಫರ್ನಾಂಡಿಸ್ (35) ಮೃತಪಟ್ಟಿದ್ದಾನೆ.

ಕಳೆದ ಕೆಲ ತಿಂಗಳಿಂದ ದಂಪತಿ ನಡುವೆ ವಾಗ್ವಾದ ನಡೆಯುತ್ತಿದ್ದು, ಇಂದು ಚಿತ್ರಾಳನನ್ನ ಗಂಡ ಹೆನ್ರಿ ಕೆ.ಆರ್.ಪುರ ದೇವಸಂದ್ರದ ಪೋಷಕರ ಮನೆಯಿಂದ ರಾಮಮೂರ್ತಿನಗರದ ಸೆಂಟ್ ಅನ್ಸ್ ಶಾಲೆ ಬಳಿಯ ಮನೆಗೆ ಕರೆ ತಂದು ತಮ್ಮ ಇಬ್ಬರು ಮಕ್ಕಳನ್ನ ಶಾಲೆಗೆ ಕಳುಹಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಭೆ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಕೆ.ಆರ್.ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

loader