ಹೆಂಡ್ತಿ ಇದ್ದಾಗಲೇ ಏನೇನೋ ಅನಾಚಾರ ಮಾಡುವವರಿದ್ದಾರೆ. ಇನ್ನೊಂದು ಕಡೆ ಹೆಂಡ್ತಿ ತೀರಿಕೊಂಡಿದ್ದರೂ ಕೂಡ, ಮನೆಯಲ್ಲಿದ್ದಾಳೆ ಅಂತ ಅನಿಸಬೇಕು ಎಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ರತಿಮೆ ಮಾಡಿಸಿದ್ದಾರೆ.
ʼಜೊತೆಗಿರದ ಜೀವ ಎಂದೂ ಜೀವಂತʼ ಎಂದು ಹೇಳೋದುಂಟು. ನಮಗೆ ಹತ್ತಿರ ಆದವರು ದೂರ ಆದಾಗಲೂ ಕೂಡ, ನಮ್ಮ ಜೊತೆಗಿದ್ದಾರೆ ಎಂದು ನೆನಪಿಟ್ಟುಕೊಳ್ಳಲು ಒಂದಲ್ಲ ಒಂದು ದಾರಿ ಹಿಡಿಯುತ್ತೇವೆ. ಇಲ್ಲೋರ್ವ ವ್ಯಕ್ತಿ ತನ್ನ ಮನೆಯ ಗೇಟ್‌ಗೆ ಪತ್ನಿಯ ಪ್ರತಿಮೆ ಹಾಕಿದ್ದಾನೆ.
ಕೊರೊನಾದಲ್ಲಿ ಪತ್ನಿ ನಿಧನ!
ಹೌದು, ಕೊರೊನಾ ಟೈಮ್‌ನಲ್ಲಿ, ದಕ್ಷಿಣ ಒಡಿಶಾದ ಬ್ರಹ್ಮಪುರದ 52 ವರ್ಷದ ಪ್ರಶಾಂತ್ ನಾಯಕ್ ಅವರು ಪತ್ನಿ ಕಿರಣ್ ಅವರನ್ನು ಕಳೆದುಕೊಂಡರು. ಇಷ್ಟು ವರ್ಷ ಸಂಸಾರ ಮಾಡಿದ್ದ ಪತ್ನಿ ಇಲ್ಲ ಎಂದಾಗ ಕಿರಣ್‌ಗೆ ತುಂಬ ದುಃಖ ಆಗಿತ್ತು. ಇದು ಅವರ ಜೀವನದ ತುಂಬ ಕಷ್ಟದ ಸಮಯ. ಕಿರಣ್ ಅವರು 1997 ರಲ್ಲಿ ಮದುವೆಯಾಗಿದ್ದು, ಇಬ್ಬರು ಹೆಣ್ಣುಮಕ್ಕಳು, ಓರ್ವ ಮಗನನ್ನು ಹೊಂದಿದ್ದಾರೆ.
ಹೆಂಡ್ತಿ ಮನೆಯಲ್ಲಿರೋದು ಭಾಸವಾಗಲಿ!
ಪ್ರಶಾಂತ್‌ಗೆ ಸದಾ ಹೆಂಡ್ತಿ ನೆನಪು ಕಾಡುತ್ತಲಿತ್ತು. ನನ್ನ ಪತ್ನಿ ನನ್ನ ಜೊತೆಗೆ ಇದ್ದಾಳೆ ಅಂತ ಅನಿಸಬೇಕು ಎಂದು ಅವರು ಬಯಸಿದ್ದರು. ಹೀಗಾಗಿ ಅವರು ಸಿಲಿಕೋನ್ ಬಳಸಿ ಹೆಂಡ್ತಿಯ ಪ್ರತಿಮೆ ಮಾಡಿಸಿದ್ದರು. ಹೀಗೆಯಾದರೂ ಹೆಂಡ್ತಿ ಮನೆಯಲ್ಲಿದ್ದಾಳೆ ಎನ್ನೋದು ಭಾಸವಾಗಲಿ ಎಂದು ಅವರು ಅಂದುಕೊಂಡಿದ್ದರು.
ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕದನ
ಬಟ್ಟೆ ಬದಲಾಯಿಸ್ತಾರೆ!
ಈಗ ಈ ಪ್ರತಿಮೆಯನ್ನು ಮನೆಯಲ್ಲಿದ್ದ ಸೋಫಾ ಮೇಲೆ ಇರಿಸಲಾಗಿದೆ. ಕಿರಣ್ ಅವರ ಹಿರಿ ಮಗಳ ಮದುವೆಯಲ್ಲಿ ಸೀರೆ, ಆಭರಣಗಳಿಂದ ಅಲಂಕಾರ ಮಾಡಿ ಪ್ರತಿಮೆಯನ್ನು ಇಡಲಾಗಿತ್ತು. ಪ್ರಶಾಂತ್ ಅವರ ಮಗಳು ಮೆಹಕ್, ಎಂಬಿಎ ವಿದ್ಯಾರ್ಥಿನಿಯಾಗಿದ್ದು, ಪ್ರತಿಮೆಯನ್ನು ನೋಡಿಕೊಳ್ತಾರೆ, ಆಗಾಗ ಬಟ್ಟೆಗಳನ್ನು ಬದಲಾಯಿಸುತ್ತಾರೆ.
ಬೆಂಗಳೂರಿನ ಶಿಲ್ಪಿ!
“ನಾನು ನನ್ನ ಹೆಂಡ್ತಿ ಪ್ರತಿಮೆ ನೋಡಿದಾಗ ಮನಸ್ಸಿಗೆ ಒಂದು ರೀತಿ ಶಾಂತಿ ಸಿಗುವುದು, ನನ್ನ ಪತ್ನಿ ಇನ್ನೂ ನನ್ನೊಂದಿಗೆ ಇದ್ದಂತೆ ಭಾಸವಾಗುತ್ತದೆ” ಎಂದು ಪ್ರಶಾಂತ್ ಹೇಳಿದ್ದಾರೆ. ಪ್ರಶಾಂತ್ ಮಕ್ಕಳು ಕೂಡ ತಮ್ಮ ತಾಯಿಯ ನೆನಪನ್ನು ಜೀವಂತವಾಗಿಡಲು ಬಯಸಿದ್ದರು, ಆದ್ದರಿಂದ ಅವರು ಬೆಂಗಳೂರಿನಿಂದ ಒಬ್ಬ ನಿಪುಣ ಶಿಲ್ಪಿಯನ್ನು ಹುಡುಕಿಕೊಂಡರು.
ಮಹಾರಾಣಾ ಪ್ರತಾಪ್ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಯೋಗಿ ಆದಿತ್ಯನಾಥ್
ಕಿರಣ್ ಜೀವಂತವಾಗಿದ್ದಾರೆ ಎಂಬ ನೆನಪು!
ಫೈಬರ್, ರಬ್ಬರ್, ಸಿಲಿಕೋನ್ ಬಳಸಿ ಪ್ರತಿಮೆಯನ್ನು ರಚಿಸಲು ಒಂದು ವರ್ಷ ಟೈಮ್ ಬೇಕಾಗಿದೆ. ಇದಕ್ಕೆ ಸುಮಾರು 8 ಲಕ್ಷ ರೂಪಾಯಿಗಳ ಖರ್ಚು ಆಗಿದೆ. ಮದುವೆಗೆ ಸ್ವಲ್ಪ ಮೊದಲು ಅವರು ಈ ಪ್ರತಿಮೆಯನ್ನು ಮನೆಗೆ ತಂದಿದ್ದಾರೆ ಆದ್ದರಿಂದ ಯಾರಿಗೂ ತಾಯಿ ಇಲ್ಲ ಎನ್ನುವ ಭಾವನೆ ಬರದಂತೆ ಮಾಡಿದ್ದಾರೆ. ಈಗ ಇಡೀ ಕುಟುಂಬವು ಕಿರಣ್ ಇದ್ದಾರೆ ಎಂಬ ಭಾವನೆಯಲ್ಲಿ ಬದುಕುತ್ತಿದೆ.
ಡಿವೋರ್ಸ್, ಕ್ರೈಂ ಪ್ರಕರಣ!
ಇಂದು ಎಷ್ಟೋ ಹುಡುಗ, ಹುಡುಗಿ ಮದುವೆಯ ಸಂಬಂಧ ಸರಿಯಾಗಿಲ್ಲ ಎಂದು ಕ್ಷುಲ್ಲಕ ಕಾರಣಕ್ಕೆ ಡಿವೋರ್ಸ್ ತಗೊಳ್ತಾರೆ. ಹೆಂಡ್ತಿ ಮನೆಯಲ್ಲಿದ್ದರೂ ಕೂಡ, ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ತಾರೆ. ಇಂದು ಎಷ್ಟೋ ದಾಂಪತ್ಯಗಳು ಕೊಲೆಯಲ್ಲಿ ಅಂತ್ಯ ಆಗ್ತಿದೆ. ಪ್ರಿಯತಮನಿಗೋಸ್ಕರ ಗಂಡನನ್ನು ಕೊಂದು ಡ್ರಮ್‌ನಲ್ಲಿ ಹಾಕೋದು, ಹೆಂಡ್ತಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ಹಾಕೋದು, ಪ್ರಿಡ್ಜ್‌ನಲ್ಲಿ ಹಾಕುವ ವರದಿಗಳು ಜಾಸ್ತಿ ಆಗ್ತಿವೆ. ಇಂಥ ಘಟನೆಗಳು ಹೆಚ್ಚುತ್ತಿರುವ ಟೈಮ್‌ನಲ್ಲಿ ಅಕಾಲಿಕ ಮರಣ ಹೊಂದಿದ ಪತ್ನಿಯನ್ನು ನೆನಪಿಟ್ಟುಕೊಳ್ಳೋಕೆ ಇಷ್ಟೆಲ್ಲ ಹಣ ಖರ್ಚು ಮಾಡೋದು, ನಿತ್ಯವೂ ಆ ಪ್ರತಿಮೆ ಬಟ್ಟೆ ಬದಲಾಯಿಸೋದು ನೋಡಿದ್ರೆ ಕಿರಣ್ ಮೇಲೆ ಕುಟುಂಬ ಇಟ್ಟಿದ್ದ ಪ್ರೀತಿ, ಪ್ರೇಮ ಎಷ್ಟು ಎಂದು ಅರ್ಥ ಆಗುವುದು. ಒಟ್ಟಿನಲ್ಲಿ ಕಿರಣ್ ಜೊತೆಗಿಲ್ಲದಿದ್ದರೂ ಕೂಡ ಪ್ರಶಾಂತ್ ಕುಟುಂಬದಲ್ಲಿ ಜೀವಂತ ಆಗಿದ್ದಾರೆ ಎನ್ನಬಹುದು. ಏನಂತೀರಾ? ಅಭಿಪ್ರಾಯ ತಿಳಿಸಿ.

