ಕಿವಿಯೋಲೆ ಕೊಟ್ಟಿಲ್ಲ‌ ಕಾರಣಕ್ಕೆ‌ ಪತ್ನಿಯ ‌ಜನನಾಂಗವನ್ನೇ ಕತ್ತರಿಸಿದ!

First Published 22, Mar 2018, 3:20 PM IST
Husband Mutilates Wife Genitals
Highlights
  • ಸಂಪ್ರದಾಯ, ಕಟ್ಟಳೆಗಳ‌ ಹೆಸರಿನಲ್ಲಿ ಮಹಿಳೆಯರ ಜನಾನಂಗವನ್ನು ಕತ್ತರಿಸುವುದು ಕೆಲ ಸಮುದಾಯಗಳಲ್ಲಿ ಈಗಲೂ ವ್ಯಾಪಕವಾಗಿದೆ. ಆದರೆ ಇಲ್ಲೊಬ್ಬ ಗಂಡ ಕ್ಷುಲ್ಲಕ ಕಾರಣಕ್ಕೆ ಈ ರೀತಿ ಬರ್ಬರ ‌ಕೃತ್ಯವೆಸಗಿದ್ದಾನೆ.

ಬೆಂಗಳೂರು: ಸಂಪ್ರದಾಯ, ಕಟ್ಟಳೆಗಳ‌ ಹೆಸರಿನಲ್ಲಿ ಮಹಿಳೆಯರ ಜನಾನಂಗವನ್ನು ಕತ್ತರಿಸುವುದು ಕೆಲ ಸಮುದಾಯಗಳಲ್ಲಿ ಈಗಲೂ ವ್ಯಾಪಕವಾಗಿದೆ. ಆದರೆ ಇಲ್ಲೊಬ್ಬ ಗಂಡ ಕ್ಷುಲ್ಲಕ ಕಾರಣಕ್ಕೆ ಈ ರೀತಿ ಬರ್ಬರ ‌ಕೃತ್ಯವೆಸಗಿದ್ದಾನೆ.

ತನ್ನ ಪತ್ನಿ ಚಿನ್ನದ ಕಿವಿಯೋಲೆಗಳನ್ನು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಪಾಕಿಸ್ತಾನದ ಬುಡಕಟ್ಟು ಜನಾಂಗದ ಡೇರಾ ಗಾಜಿ ಖಾನ್ ಎಂಬಾತ ಹೀನ ಕೃತ್ಯವೆಸಗಿದ್ದಾನೆಂದು ಇಂಡಿಯಾಟೈಂಸ್ ವರದಿ ಮಾಡಿದೆ.

ಮೊದಲು ಕಿವಿಯೋಲೆಗಳಿಗಾಗಿ ಆತ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಆಕೆ ಒಪ್ಪದಿದ್ದಾಗ ಆಕೆಯನ್ನು ಕೋಣೆಯೊಳಗೆ ಕೂಡಿಟ್ಟು ಈ ರೀತಿ ಮಾಡಿದ್ದಾನೆಂದು ಹೇಳಲಾಗಿದೆ.

ಮಹಿಳೆಯ ಆಕ್ರಂದನ ಕೇಳಿ ಕುಟುಂಬಸ್ಥರು ಬಾಗಿಲು ಮುರಿದು ಒಳನುಗ್ಗಿದ್ದಾಗ ಆಕೆ ರಕ್ತಸ್ರಾವದಿಂದ ಒದ್ದಾಡುತ್ತಿರುವುದು ಗಮನಕ್ಕೆ ಬಂದಿದೆ. ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆಫ್ರಿಕಾದ ಕೆಲ ದೇಶಗಳಲ್ಲಿ ಹಾಗೂ ‌ಬೊಹ್ರಾ ಸಮುದಾಯದಲ್ಲಿ ಮಹಿಳೆಯ ಯೋನಿಚ್ಛೇದನ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ಅದನ್ನು ಸಂಪೂರ್ಣವಾಗಿ ನಿ‌ಷೇಧಿಸಬೇಕೆಂದು ಹೋರಾಟಗಳು ಕೂಡಾ ನಡೆಯುತ್ತಿವೆ.

loader