ಹೆಂಡತಿ ನನಗೆ ಗೌರವ ಕೊಡ್ತಿಲ್ಲ. ಅವಳು ನನಗೆ ಗೌರವ ಕೊಡುವಂತೆ ಮಾಡಿ. ಇಲ್ಲವಾದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಹೀಗಂತಾ ಪತಿರಾಯನೊಬ್ಬ ಕೈಯಲ್ಲಿ ಪೆಟ್ರೋಲ್ ಕ್ಯಾನ್ ಹಿಡಿದು ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅರಮನೆ ನಗರಿಯಲ್ಲಿ ನಡೆದಿದೆ.

ಮೈಸೂರು(ಮಾ.07): ಹೆಂಡತಿ ನನಗೆ ಗೌರವ ಕೊಡ್ತಿಲ್ಲ. ಅವಳು ನನಗೆ ಗೌರವ ಕೊಡುವಂತೆ ಮಾಡಿ. ಇಲ್ಲವಾದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಹೀಗಂತಾ ಪತಿರಾಯನೊಬ್ಬ ಕೈಯಲ್ಲಿ ಪೆಟ್ರೋಲ್ ಕ್ಯಾನ್ ಹಿಡಿದು ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅರಮನೆ ನಗರಿಯಲ್ಲಿ ನಡೆದಿದೆ.

ಮೈಸೂರಿನ ಗಾಯಿತ್ರಿಪುರಂ ನಿವಾಸಿ ಅರುಣ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ನನ್ನ ಹೆಂಡತಿ ನನಗೆ ಗಂಡನಿಗೆ ನೀಡಬೇಕಾದ ಮರಿಯಾದೆ ನೀಡ್ತಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ಅರುಣ್ ಕುಮಾರ್ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ವಾಟರ್ ಟ್ಯಾಂಕ್ ಮೇಲಿರಿದ್ದಾನೆ.

ಆ ಬಳಿಕ ಲಕ್ಷ್ಮಿಪುರಂ ಠಾಣೆ ಪೊಲೀಸರು ಆತನ ಮನವೊಲಿಸಿ ರಕ್ಷಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ನಾನು ಈ ಯತ್ನ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ.