ಶಾಲೆಯಲ್ಲಿ ಮಕ್ಕಳಿಗೆ ನೈತಿಕತೆ ಬೋಧಿಸುವ ಶಿಕ್ಷಕನೋರ್ವ ಮನೆಯಲ್ಲಿ ಸೊಸೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೆ ಸೊಸೆಯನ್ನು ಬಾಣಂತನಕ್ಕೆ ಕಳುಹಿಸಿ ಮಗನಿಗೆ ಇನ್ನೊಂದು ಮದುವೆ ಮಾಡಿ, ಹುಡುಗಿಯ ಸಂಬಂಧಿಕರಿಂದ ಹಿಗ್ಗಾಮುಗ್ಗಾ ಗೂಸಾ ತಿಂದಿದ್ದಾನೆ.

ತುಮಕೂರು(ನ.24): ಶಾಲೆಯಲ್ಲಿ ಮಕ್ಕಳಿಗೆ ನೈತಿಕತೆ ಬೋಧಿಸುವ ಶಿಕ್ಷಕನೋರ್ವ ಮನೆಯಲ್ಲಿ ಸೊಸೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೆ ಸೊಸೆಯನ್ನು ಬಾಣಂತನಕ್ಕೆ ಕಳುಹಿಸಿ ಮಗನಿಗೆ ಇನ್ನೊಂದು ಮದುವೆ ಮಾಡಿ, ಹುಡುಗಿಯ ಸಂಬಂಧಿಕರಿಂದ ಹಿಗ್ಗಾಮುಗ್ಗಾ ಗೂಸಾ ತಿಂದಿದ್ದಾನೆ.

ಈ ಘಟನೆ ನಡೆದದ್ದು ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ.ಶಿರಾ ತಾಲೂಕಿನ ಬೆಂಚೇ ಗ್ರಾಮದ ಪ್ರೌಢಶಾಲೆಯ ಶಿಕ್ಷಕನಾಗಿರುವ ಕೆ. ರಂಗಯ್ಯ ಹಾಗೂ ಆತನ ಮಗ ರಂಜಿತ್ ಗೂಸಾ ತಿಂದವರು. ನಾಲ್ಕು ವರ್ಷದ ಹಿಂದೆ ಶಿಕ್ಷಕ ರಂಗಯ್ಯ ತನ್ನ ಮಗ ರಂಜೀತನಿಗೆ ಬುಕ್ಕಾಪಟ್ಟಣದ ರಾಧಿಕಾ ಎಂಬುವವರ ಜೊತೆ ಮದುವೆ ಮಾಡಿಸಿದ್ದ. ಆದರೆ ಸೊಸೆ ರಾಧಿಕಾಗೆ ಸ್ವತಃ ಮಾವ ರಂಗಯ್ಯನೇ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ಬೇಸತ್ತ ರಾಧಿಕಾ ಗಂಡನ ಮನೆಬಿಟ್ಟು ಹೋಗಿದ್ದಾಳೆ.

ಆದರೆ ಅಷ್ಟಕ್ಕೇ ಸುಮ್ಮನಾಗದ ರಂಗಯ್ಯ ತನ್ನ ಮಗನಿಗೆ ಇನ್ನೊಂದು ಮದುವೆ ಮಾಡಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ರಾಧಿಕಾ ಕಡೆಯವರು ರಂಗಯ್ಯನ ಮನೆಗೆ ನುಗ್ಗಿ ರಂಗಯ್ಯ ಹಾಗೂ ಮಗ ರಂಜಿತ್ ಗೆ ಥಳಿಸಿದ್ದಾರೆ.ಈ ಸಂಬಂಧ ಶಿರಾ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.