ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಪತಿಯೊಬ್ಬ ಪತ್ನಿಗೆ ಒತ್ತಾಯಿಸಿರುವ ವಿಕೃತ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ(ಮಾ.27): ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಪತಿಯೊಬ್ಬ ಪತ್ನಿಗೆ ಒತ್ತಾಯಿಸಿರುವ ವಿಕೃತ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ.
ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದಲ್ಲಿ ಸಂಜೀವ ಭಾಗೋಜಿ ತನ್ನ ಪತ್ನಿಗೆ ಒತ್ತಾಯಪೂರ್ವಕವಾಗಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ಮಾಡಿಸಿದ್ದಾನೆ. ಮತ್ತೆ ಮತ್ತೆ ನಾಯಿ ಜೊತೆಗೆ ಮಲಗುವಂತೆ ಹಿಂಸೆ ನೀಡುತ್ತಿದ್ದ ಪತಿ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾರೆ.
ಕಟಕೋಳ ಪೊಲೀಸರು ಆರೋಪಿ ಪತಿ ಸಂಜೀವ ಭಾಗೋಜಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
