ಕಳೆದ ಮೂರ್ನಾಲ್ಕು ದಿನಗಳಿಂದ ಕೆರಿಬಿಯನ್ ದ್ವೀಪದಲ್ಲಿ 35 ಜನರನ್ನ ಇರ್ಮಾ ಚಂಡಮಾರುತ ಬಲಿತೆಗೆದುಕೊಂಡಿದ್ದು, ಸೇಂಟ್‌ ಮೇರಿಸ್‌ನಲ್ಲಿದ್ದ 65 ಭಾರತೀಯರನ್ನು ರಕ್ಷಿಸಲಾಗಿದೆ.

ಫ್ಲೋರಿಡಾ(ಸೆ.11): ಪ್ರಪಂಚದ ದೊಡ್ಡಣ್ಣ ಅಮೆರಿಕಾವನ್ನ ವಿನಾಶಕಾರಿ ಚಂಡಮಾರುತ ಇರ್ಮಾ ಬೆಚ್ಚಿ ಬೀಳಿಸಿದೆ. ಕೆರಿಬಿಯನ್ ದ್ವೀಪಗಳಲ್ಲಿ 35ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಇರ್ಮಾ ಚಂಡಮಾರುತ, ಇದೀಗ ಅಮೆರಿಕದ ಫ್ಲೋರಿಡಾಗೆ ಅಪ್ಪಳಿಸಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಕೆರಿಬಿಯನ್ ದ್ವೀಪದಲ್ಲಿ 35 ಜನರನ್ನ ಇರ್ಮಾ ಚಂಡಮಾರುತ ಬಲಿತೆಗೆದುಕೊಂಡಿದ್ದು, ಸೇಂಟ್‌ ಮೇರಿಸ್‌ನಲ್ಲಿದ್ದ 65 ಭಾರತೀಯರನ್ನು ರಕ್ಷಿಸಲಾಗಿದೆ. ಆದರೆ ಇರ್ಮಾ ಈಗ ಫ್ಲೋರಿಡಾದಲ್ಲಿ ತನ್ನ ರೌದ್ರ ನರ್ತನ ಆರಂಭಿಸಿದೆ. ಫ್ಲೋರಿಡಾದಲ್ಲಿ ಸುಮಾರು 1,20,000 ಅಮೆರಿಕನ್‌-ಭಾರತೀಯರು ವಾಸಿಸುತ್ತಿದ್ದು, ಅತ್ಯಂತ ಅಪಾಯಕಾರಿ ವಲಯಗಳಲ್ಲಿ ಒಂದಾಗಿರುವ ಮಿಯಾಮಿ, ಫೋರ್ಟ್ ಲಾರ್ಡೆಲ್ ಮತ್ತು ಟ್ಯಾಂಪಾದಲ್ಲಿ ಒಟ್ಟು 63 ಲಕ್ಷ ಜನರನ್ನ ಸ್ಥಳಾಂತರಿಸಲಾಗಿದೆ.

ಚಂಡಮಾರುತದಿಂದ ಜನರನ್ನು ರಕ್ಷಿಸಲು ಈವರೆಗೆ 7,400ಕ್ಕೂ ಹೆಚ್ಚು ಮಂದಿಯನ್ನು ನಿಯೋಜಿಸಲಾಗಿದೆ.