ಐಟಿ ದಾಳಿಯಿಂದಾಗಿ ಡಿಕೆ ಶಿವಕುಮಾರ್ ತಮ್ಮ ನಿವಾಸದಲ್ಲೇ 3-4 ದಿನ ಇರಬೇಕಾಗಿ ಬಂದಿತು. ಈ ಸಮಯದಲ್ಲಿ ಐಟಿ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸಾ ವೈದ್ಯರನ್ನು ಕರೆತರಲೇ ಇಲ್ಲ. ಮನೆಯ ಬಳಿ ಆ್ಯಂಬುಲೆನ್ಸ್'ನ ನಿಯೋಜನೆಯೂ ಇರಲಿಲ್ಲ. ಸತತ ವಿಚಾರಣೆ ಮೂಲಕ ಡಿಕೆಶಿ ಅವರನ್ನು ಮಾನಸಿಕವಾಗಿ ಹಿಂಸಿಸಿ ತೇಜೋವಧೆ ಮಾಡಲಾಗಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ.

ಬೆಂಗಳೂರು(ಆ. 05): ಡಿಕೆಶಿ ಮೇಲೆ ದಾಳಿ ಮೂರ್ನಾಲ್ಕು ದಿನ ಸಂಪೂರ್ಣ ತಲಾಶ್ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧವೇ ಈಗ ದೂರು ದಾಖಲಾಗಿದೆ. ಐಟಿ ದಾಳಿ ವೇಳೆ ಮಾನವ ಹಕ್ಕುಗಳು ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಾನವ ಹಕ್ಕು ಸಮಿತಿ ಸದಸ್ಯ ಮಂಜುನಾಥ ಸ್ವಾಮಿ ಅವರು ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಅವರಿಗೆ ದೂರು ಸಲ್ಲಿಸಿದ್ದಾರೆ.

ಐಟಿ ದಾಳಿಯಿಂದಾಗಿ ಡಿಕೆ ಶಿವಕುಮಾರ್ ತಮ್ಮ ನಿವಾಸದಲ್ಲೇ 3-4 ದಿನ ಇರಬೇಕಾಗಿ ಬಂದಿತು. ಈ ಸಮಯದಲ್ಲಿ ಐಟಿ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸಾ ವೈದ್ಯರನ್ನು ಕರೆತರಲೇ ಇಲ್ಲ. ಮನೆಯ ಬಳಿ ಆ್ಯಂಬುಲೆನ್ಸ್'ನ ನಿಯೋಜನೆಯೂ ಇರಲಿಲ್ಲ. ಸತತ ವಿಚಾರಣೆ ಮೂಲಕ ಡಿಕೆಶಿ ಅವರನ್ನು ಮಾನಸಿಕವಾಗಿ ಹಿಂಸಿಸಿ ತೇಜೋವಧೆ ಮಾಡಲಾಗಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ.

ಸುವರ್ಣನ್ಯೂಸ್ ಜೊತೆ ಮಾತನಾಡಿದ ದೂರುದಾರ ಮಂಜುನಾಥ್ ಸ್ವಾಮಿ, ಐಟಿಯವರು ಕರ್ನಾಟಕದವರ ಮೇಲೆಯೇ ಟಾರ್ಗೆಟ್ ಮಾಡುತ್ತಿದ್ದಾರೆಂದು ಖಂಡಿಸಿದ್ದಾರೆ. ಪ್ರಬಲ ಕಾರಣವಿಲ್ಲದೇ ಯಾವುದೇ ವ್ಯಕ್ತಿಯನ್ನು 3-4 ದಿನ ಸತತವಾಗಿ ಮಾನಸಿಕವಾಗಿ ಹಿಂಸಿಸುವುದು ತಪ್ಪು ಎಂದವರು ಅಭಿಪ್ರಾಯಪಟ್ಟಿದ್ದಾರೆ.