ಒಬಿಸಿ ವರ್ಗಕ್ಕೆ ಸೇರಿದ ಹುಕುಂದೇವ್ ಹೆಸರಿಗೆ ಈಗಾಗಲೇ ಎನ್‌ಡಿಎದ ಮಿತ್ರಪಕ್ಷಗಳು ಸಮ್ಮತಿ ಸೂಚಿಸಿದ್ದು, ಜೆಡಿಯು ಕೂಡಾ ಬೆಂಬಲ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನವದೆಹಲಿ(ಮಾ.24): ಬಿಹಾರ ಮೂಲದ ಹಿರಿಯ ಬಿಜೆಪಿ ನಾಯಕ, ಹುಕುಂದೇವ್ ನಾರಾಯಣ್ ಯಾದವ್ ಅವರನ್ನು ಉಪರಾಷ್ಟ್ರಪತಿ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಒಬಿಸಿ ವರ್ಗಕ್ಕೆ ಸೇರಿದ ಹುಕುಂದೇವ್ ಹೆಸರಿಗೆ ಈಗಾಗಲೇ ಎನ್ಡಿಎದ ಮಿತ್ರಪಕ್ಷಗಳು ಸಮ್ಮತಿ ಸೂಚಿಸಿದ್ದು, ಜೆಡಿಯು ಕೂಡಾ ಬೆಂಬಲ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಅಕಾರಾವ ಇದೇ ಜುಲೈಗೆ ಮುಗಿಯಲಿದೆ. ಹುಕುಂದೇವ್ ಈ ಹಿಂದೆ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಸಂಸತ್ತಿನಲ್ಲಿ ಆಕ್ರೋಶ ಭರಿತ ಭಾಷಣಕ್ಕೆ ಖ್ಯಾತಿ ಹೊಂದಿದ್ದಾರೆ.

