ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ರವರಿಗೆ ಆಡಳಿತದಲ್ಲಿ ಹಿಡಿತ ಇಲ್ಲವೇ? ಅವರ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಂದ ನಡೆಯುವ ಕೋಟಿ-ಕೋಟಿ ಲೂಟಿ ಗಮನಕ್ಕೆ ಬರುವದಿಲ್ಲವೆ? ಮೂರು ವರ್ಷದಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಅಂದಾಜು 100 ಕೋಟಿ ಲೆಕ್ಕ ಎಲ್ಲಿ? ಎಂಬ ಪ್ರಶ್ನೆ ಎದ್ದಿದೆ.

ಬೆಂಗಳೂರು (ನ.26): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ರವರಿಗೆ ಆಡಳಿತದಲ್ಲಿ ಹಿಡಿತ ಇಲ್ಲವೇ? ಅವರ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಂದ ನಡೆಯುವ ಕೋಟಿ-ಕೋಟಿ ಲೂಟಿ ಗಮನಕ್ಕೆ ಬರುವದಿಲ್ಲವೆ? ಮೂರು ವರ್ಷದಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಅಂದಾಜು 100 ಕೋಟಿ ಲೆಕ್ಕ ಎಲ್ಲಿ? ಎಂಬ ಪ್ರಶ್ನೆ ಎದ್ದಿದೆ.

ಬಿಬಿಎಂಪಿಯಲ್ಲಿ ಮತ್ತೊಂದು ಬಹುಕೋಟಿ ಅವ್ಯವಹಾರದ ವಾಸನೆ ಹೊಡೀತಿದೆ. ಮಳೆಹಾನಿ.. ಕಟ್ಟಡ ಕುಸಿತ. ಇಂಥ ಸಮಯದಲ್ಲಿ ಬಳಸಬೇಕಿದ್ದ ಕೇಂದ್ರ ಮೀಸಲು ನಿಧಿಯಲ್ಲಿ ಕಳೆದ ಮೂರು ವರ್ಷದಲ್ಲಿ 50-100 ಕೋಟಿ ಖರ್ಚಾಗಿದ್ದು ಎಲ್ಲಿ ಖರ್ಚಾಗಿದೆ? ಯಾವುದಕ್ಕೆ ಖರ್ಚಾಗಿದೆ? ಅನ್ನೋದಕ್ಕೆ ದಾಖಲೆಗಳೇ ಇಲ್ಲ.

 ಜಾಬ್ ಕೋಡ್ 541ಪಿ ಅಡಿಯಲ್ಲಿ 2016-17 ರಲ್ಲಿ 25 ಕೋಟಿ, 2017-18 ರಲ್ಲಿ 25 ಕೋಟಿ ಹಣ ಖರ್ಚಾಗಿದೆ. 2015-16ರಲ್ಲಿ ಕೂಡಾ ಕೋಟಿ-ಕೋಟಿ ಹಣ ಖರ್ಚಾಗಿದೆ. ಈ ಹಣ ಬಳಕೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ವಿವೇಚನೆಗೆ ಬಿಟ್ಟಿದ್ದು. ಹೀಗಾಗಿ ಆಯುಕ್ತರ ಅಧೀನ ಅಧಿಕಾರಿಗಳಾದ ಸಿಎಫ್ ಒ ಶಿವಕುಮಾರ್ ಮತ್ತು ಸಿಎಓ ಮಹದೇವ್ ಅವರೇ ಈ ಹಣ ದುರ್ಬಳಕೆ ಮಾಡಿಕೊಂಡರಾ ಅನುಮಾನ ಮೂಡಿದೆ.

ಪಾಲಿಕೆ ಲೆಕ್ಕ ಪತ್ರ ಸಮಿತಿ ಮಾಜಿ ಅಧ್ಯಕ್ಷರಾದ ನೇತ್ರಾ ನಾರಾಯಣರು ಹೇಳೋ ಪ್ರಕಾರ ಪಾಲಿಕೆಯಲ್ಲಿ ಮತ್ತೊಂದು ಬಹುಕೋಟಿ ಅಕ್ರಮದ ವಾಸನೆ ಹೊಡೆಯುತ್ತಿದೆ. ಇನ್ನೂ ಇದನ್ನು ಪ್ರಶ್ನಿಸಬೇಕಾಗಿದ್ದ ಪಾಲಿಕೆ ಸದಸ್ಯರು, ವಿಪಕ್ಷ ನಾಯಕರು, ಸುಮ್ಮನಿರೋದು ಭ್ರಷ್ಟಾಚಾರದಲ್ಲಿ ಇವರೂ ಪಾಲುದಾರರೇ ಎಂಬ ಪ್ರಶ್ನೆ ಮೂಡಿಸಿದೆ.