ಸಿನಿಮಾ ಇಷ್ಟ ಇಲ್ಲ ಅಂದರೆ ಸಿನಿಮಾ ನೋಡಲು ಬರಬೇಡಿ ಅಂತಾ ಹುಚ್ಚವೆಂಕಟ್ ಮುದ್ರಣ ಮಾಧ್ಯಮವೊಂದರ ವಿರುದ್ಧ ಸುದ್ದಿಗೋಷ್ಟಿಯಲ್ಲೇ ಕಿಡಿಕಾರಿದ್ದಾರೆ.
ಬೆಂಗಳೂರು(ಮೇ.02): ಪೊರ್ಕಿ ಹುಚ್ಚ ವೆಂಕಟ್ ಸಿನಿಮಾ ಬಗ್ಗೆ ಮಾಧ್ಯಮವೊಂದು ಸರಿಯಾಗಿ ವಿಮರ್ಶೆ ಮಾಡಿಲ್ಲ ಅಂತಾ ಆರೋಪಿಸಿ ಸುದ್ದಿಗೋಷ್ಠಿ ವೇಳೆಯೇ ಪತ್ರಕರ್ತರ ವಿರುದ್ಧ ಹುಚ್ಚ ವೆಂಕಟ್ ಹರಿಹಾಯ್ದಿದ್ದಾರೆ. ಮುದ್ರಣ ಮಾಧ್ಯಮದವರು ನನ್ನನ್ನ ನಿಂದಿಸಿ ವಿಮರ್ಶೆ ಮಾಡಿದ್ದಾರೆ ಅಂತಾ ಹುಚ್ಚ ವೆಂಕಟ್ ಸಿಡಿಮಿಡಿಗೊಂಡಿದ್ದಾರೆ. ಹುಚ್ಚವೆಂಕಟ್ ಹೇಳಿಕೆ ಬಗ್ಗೆ ಬರೆಯೋ ಅಧಿಕಾರ ನಿಮಗಿದೆ. ಆದರೆ ವಿಮರ್ಶೆ ಮಾಡುವ ಆಗಿಲ್ಲ. ಸಿನಿಮಾ ಇಷ್ಟ ಇಲ್ಲ ಅಂದರೆ ಸಿನಿಮಾ ನೋಡಲು ಬರಬೇಡಿ ಅಂತಾ ಹುಚ್ಚವೆಂಕಟ್ ಮುದ್ರಣ ಮಾಧ್ಯಮವೊಂದರ ವಿರುದ್ಧ ಸುದ್ದಿಗೋಷ್ಟಿಯಲ್ಲೇ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳು ತೆಲುಗು ಸಿನಿಮಾ ನೋಡ್ತಾರೆ . ಕನ್ನಡ ಚಿತ್ರ ನೋಡಿ ಅಂತಾ ಹೇಳಿದ ಹುಚ್ಚ ವೆಂಕಟ್, ಕೊನೆಗೆ ನನ್ನಿಂದ ತಪ್ಪಾಗಿದ್ದಲ್ಲಿ ಕ್ಷಮೆ ಇರಲಿ ಅಂತಾ ಹೇಳಿ ಹೊರ ನಡೆದರು.
