PU ಮಂಡಳಿಯ ಲೋಪ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಮಗನ ಭವಿಷ್ಯಹಾಳು ಮಾಡಿರೋ ಪದವಿ ಪೂರ್ವ ಪರೀಕ್ಷಾ ಮಂಡಳಿ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಪಿಯು ಮಂಡಳಿ ನಿರ್ದೇಶಕ ಶ್ರೀನಾಥ್ ಅವರು, ಶ್ರೀನಿಧಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.

ಹುಬ್ಬಳ್ಳಿ(ಮೇ 28): ಪ್ರತಿವರ್ಷ PU ಪರೀಕ್ಷಾ ಮಂಡಳಿ ಒಂದಲ್ಲಾ ಒಂದು ಯಡವಟ್ಟು ಮಾಡುತ್ತಲೇ ಇದ್ದು ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡ್ತಿದೆ. ಹುಬ್ಬಳ್ಳಿ ವಿದ್ಯಾರ್ಥಿಯೊಬ್ಬರ ಮೌಲ್ಯಮಾಪನದಲ್ಲೂ ದೊಡ್ಡ ಯಡವಟ್ಟು ಮಾಡಿದೆ. ಪ್ರೇರಣಾ ಕಾಲೇಜಿನ ವಿದ್ಯಾರ್ಥಿ ಶ್ರೀನಿಧಿ ಪುರಾಣಿಕ್'ನ ಉಜ್ವಲ ಭವಿಷ್ಯ ಕನಸು ಮಣ್ಣು ಪಾಲಾಗಿದೆ. ಶ್ರೀನಿಧಿ ಪುರಾಣಿಕ್(ನಂಬರ್ 655652) ಎಲ್ಲಾ ವಿಷಯಗಳಲ್ಲಿ ಶೇಕಡ 90ಕ್ಕೂ ಹೆಚ್ಚು ಅಂಕ‌ ಗಳಿಸಿದ್ದಾನೆ. ಆದ್ರೆ, ರಸಾಯನಶಾಸ್ತ್ರಕ್ಕೆ ಮಾತ್ರ ಕೇವಲ 41 ಅಂಕ ಬಂದಿದೆ. ಹೀಗಾಗಿ, ಮರುಮೌಲ್ಯಮಾಪನಕ್ಕೆ ಚಿಂತಿಸಿ ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆದುಕೊಂಡಿದ್ದಾರೆ. ಮುಖಪುಟ ನೋಡಿದಾಗಲೇ ಶ್ರೀನಿಧಿ ಮತ್ತು ಪೋಷಕರಿಗೆ ತಲೆ ಸುತ್ತು ಬಂದಿದೆ. ಉತ್ತರ ಪತ್ರಿಕೆಯ ಮುಖಪುಟ ಮಾತ್ರ ಶ್ರೀನಿಧಿಯಾದಾಗಿತ್ತು. ಉಳಿದ ಪುಟಗಳು ಬೇರೆ ವಿದ್ಯಾರ್ಥಿಗೆ ಸೇರಿದ್ದಾಗಿದೆ. ಇದರಿಂದಾಗಿ ಶ್ರೀನಿಧಿಯ ಪೂರ್ಣ ಪ್ರಮಾಣದ ಉತ್ತರ ಪತ್ರಿಕೆ‌ ಎಲ್ಲಿ ಹೋಯ್ತು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. PU ಮಂಡಳಿಯ ಲೋಪ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಮಗನ ಭವಿಷ್ಯಹಾಳು ಮಾಡಿರೋ ಪದವಿ ಪೂರ್ವ ಪರೀಕ್ಷಾ ಮಂಡಳಿ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಪಿಯು ಮಂಡಳಿ ನಿರ್ದೇಶಕ ಶ್ರೀನಾಥ್ ಅವರು, ಶ್ರೀನಿಧಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.