ಅತ್ಯಂತ ಎತ್ತರದ ಪರ್ವತಶ್ರೇಣಿ ಮೌಂಟ್ ಎವರೆಸ್ಟ್ ಶಿಖರ ಹತ್ತಿ ಸಾಧನೆ ಮಾಡಿದ್ದ ಹುಬ್ಬಳ್ಳಿಯ ನಂದಿತಾ ನಾಗನಗೌಡರ್, ಇದೀಗಾ ಮತ್ತೊಂದು ಸಾಧನೆ ಮುಡಿಗೆರಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಅತಿ ಎತ್ತರದ ಪರ್ವತ ಶಿಖರ ಕರ್'ಸ್ಟೆಂಝ್ ಪಿರಾಮಿಡ್ ಏರುವ ಮೂಲಕ ಕನ್ನಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ.

ಹುಬ್ಬಳ್ಳಿ: ನಂದಿತಾ ನಾಗನ ಗೌಡರ ಗಂಡು ಮೆಟ್ಟಿದ ನಾಡಿನ ಕೆಚ್ಚೆದೆಯ ಹೆಣ್ಣುಮಗಳು. ಹುಬ್ಬಳ್ಳಿಯ ನಂದಿತಾ ಈ ಹಿಂದೆ ಅತ್ಯಂತ ಎತ್ತರದ ಪರ್ವತಶ್ರೇಣಿ ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡಿದ್ದರು. ಸುವರ್ಣ ನ್ಯೂಸ್ ಇವರನ್ನ ಗೌರವಿಸಿತ್ತೂ ಕೂಡ.. ಇದೀಗ ಅದಕ್ಕಿಂತಲೂ ಎತ್ತರದ ಶಿಖರವೇರಿ ವಿದೇಶದಲ್ಲೂ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ ನಂದಿತಾ.

ಕಾರ್'ಸ್ಟೆಂಜ್ ಪಿರಾಮಿಡ್ (Carstenz Pyramid) - ಇದು ಆಸ್ಟ್ರೇಲಿಯಾ ಖಂಡದ ಅತ್ಯಂತ ಎತ್ತರದ ಪರ್ವತ ಶ್ರೇಣಿ. ತೀರಾ ಕಡಿದಾದ ತುತ್ತ ತುದಿ. 4888 ಮೀಟರ್ ಎತ್ತರದ, ಆಂದರೆ 17. 800ಅಡಿ ಎತ್ತರದ ಈ ಶಿಖರ ತಲುಪುವುದೆಂದರೆ ನಮ್ಮ ದೇಶದ ಮೌಂಟ್ ಎವರೆಸ್ಟ್ ಶಿಖರ ಏರುವುದಕ್ಕಿಂತಲೂ ಕಷ್ಟಕರ. ಮೈನಸ್ 10 ಡಿಗ್ರಿ ತಾಪಮಾನದಲ್ಲಿ ಕಾರ್'ಸ್ಟೆಂಝ್ ಏರುವ ಮೂಲಕ ಈ ಶಿಖರ ಏರಿದ ಮೊದಲ ಕನ್ನಡಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಂದಿತಾ ಅವರು ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಮುಗಿಸಿ, ಇಂಗ್ಲೆಂಡ್'ನ ಕೋವೆಂಟ್ರಿ ಯುನಿವರ್ಸಿಟಿಯಲ್ಲಿ ಇಂಟರ್'ನ್ಯಾಷನಲ್ ಬಿಸಿನೆಸ್'ನಲ್ಲಿ ಎಂಬಿಎ ಓದಿದ್ದಾರೆ. ಆದ್ರೂ ಪರ್ವತಾರೋಹಣವನ್ನೇ ಸ್ಪೂರ್ತಿಯಾಗಿ ಸ್ವಿಕರಿಸಿ ಅಮೋಘ ಸಾಧನೆ ಮಾಡಿದ್ದಾಳೆ

ಇವರ ಮುಂದಿನ ಗುರಿ ಅಂಟಾರ್ಟಿಕಾ ಖಂಡದ ಪರ್ವತ ಏರುವುದು.. ಇವರ ಈ ಸಾಧನಾ ಹಾದಿ ಯಶಸ್ವಿಯಾಗಿ ಸಾಗಲಿ.. ಇನ್ನಷ್ಟು ದಾಖಲೆಗಳು ನಂದತಾ ಹೆಸರಿಗೆ ಸೇರಲಿ ಅನ್ನೋದು ನಮ್ಮ ಹಾರೈಕೆ..

- ಗುರುರಾಜ ಹೂಗಾರ್, ಸುವರ್ಣ ನ್ಯೂಸ್, ಹುಬ್ಬಳ್ಳಿ