ಧಾರವಾಡ [ಜ.11]  ಮೃತ್ಯುಂಜಯ ಮುರುಘಾಮಠದ ಸ್ವಾಮೀಜಿಗಳ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದೆ. ಸ್ವಾಮಿಗಳ ಅಕೌಂಟ್ ಹ್ಯಾಕ್ ಮಾಡಿದ ಕಿರಾತಕರು ಮಹಿಳೆಯ ಫೋಟೋ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ.

ಮಹಿಳೆಯ ಭಾವಚಿತ್ರವನ್ನು ಪ್ರೋಫೈಲ್ ಹಾಗೂ ಕವರ್ ಪೋಟೋ ಮಾಡಿ ಹಾಕಲಾಗಿದೆ. ಹು-ಧಾ ಪೊಲೀಸ್ ಕಮಿಷನರ್ ಗೆ ಮೃತ್ಯುಂಜಯ ಮುರುಘಾಮಠದ ಸ್ವಾಮೀಜಿ ದೂರು ನೀಡಿದ್ದಾರೆ.

ಬಾಲಿವುಡ್‌ನೊಂದಿಗೆ ಮೋದಿ..ವೈರಲ್‌ ಆಯ್ತು ವರ್ಷದ ಚಿತ್ರ

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ವೆಬ್‌ ತಾಣವೇ ಹ್ಯಾಕ್ ಆಗಿತ್ತು. ಸೋಶಿಯಲ್ ಮೀಡಿಯಾ ಮತ್ತು ಕೆಲ ಸಂಘ ಸಂಸ್ಥೆಗಳ ಖಾತೆ ಹ್ಯಾಕ್ ಆಗುವುದರ ಬಗ್ಗೆ ನಿರಂತರ ದೂರುಗಳು ದಾಖಲಾಗುತ್ತಲೇ ಇರುತ್ತವೆ