4 ಬಾರಿ 4 ಪಕ್ಷದಿಂದ ಗೆದ್ದಿದ್ದ ಎಚ್.ಎಸ್.ಮಹದೇವಪ್ರಸಾದ್

HSM win Election 4 party
Highlights

ಸತತ ಗೆಲುವುಗಳನ್ನು ಕಂಡ ಪ್ರಸಾದ್ ಅವರು ಮೊದಲ ಎರಡು ಚುನಾವಣೆಗಳಲ್ಲಿ ರಾಜ್ಯದ ಮೊದಲ ಮಹಿಳಾ ಸ್ಪೀಕರ್ ನಾಗರತ್ನಮ್ಮ ಎದುರು ಪರಾಭವಗೊಂಡಿದ್ದರು.

2017ರ ಜನವರಿಯಲ್ಲಿ ನಿಧನರಾದ ಮಾಜಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ರಾಜಕೀಯ ಜೀವನದಲ್ಲೊಂದು ವಿಶೇಷತೆ ಇದೆ. 1994ರಿಂದ 2008ರವರೆಗೆ ಅವರು ಸತತ ನಾಲ್ಕು ಬಾರಿ ಜಯಭೇರಿ ಬಾರಿಸಿದ್ದರು. ಆದರೆ ಈ ನಾಲ್ಕೂ ಸಲವು ಅವರು ಸ್ಪರ್ಧೆ ಮಾಡಿದ ಪಕ್ಷಗಳು ಬೇರೆ ಬೇರೆಯಾಗಿದ್ದವು! 1994ರಲ್ಲಿ ಜನತಾದಳದಿಂದ, 1999ರಲ್ಲಿ ಜೆಡಿಯುನಿಂದ, 2004ರಲ್ಲಿ ಜೆಡಿಎಸ್‌ನಿಂದ, 2008ರಲ್ಲಿ ಕಾಂಗ್ರೆಸ್‌ನಿಂದ ಜಯಭೇರಿ ಬಾರಿಸಿದ್ದರು. 2013ರಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಆಯ್ಕೆಯಾದರು. ಸತತ ಗೆಲುವುಗಳನ್ನು ಕಂಡ ಪ್ರಸಾದ್ ಅವರು ಮೊದಲ ಎರಡು ಚುನಾವಣೆಗಳಲ್ಲಿ ರಾಜ್ಯದ ಮೊದಲ ಮಹಿಳಾ ಸ್ಪೀಕರ್ ನಾಗರತ್ನಮ್ಮ ಎದುರು ಪರಾಭವಗೊಂಡಿದ್ದರು.

 

loader