ಬೆಂಗಳೂರು :  ಅಗ್ನಿ ಶಾಮಕ ದಳದ ಡಿಐಜಿಪಿ ಎಚ್‌.ಎಸ್‌.ರೇವಣ್ಣ ಅವರನ್ನು ಉತ್ತರ ವಲಯದ ಐಜಿಪಿ ಪ್ರಭಾರಿಯಾಗಿ ನಿಯೋಜಿಸಿ ರಾಜ್ಯ ಸರ್ಕಾರವು ಗುರುವಾರ ಆದೇಶ ಹೊರಡಿಸಿದೆ.

ಉತ್ತರ ಐಜಿಪಿಯಾಗಿದ್ದ ಅಲೋಕ್‌ ಕುಮಾರ್‌ ಅವರನ್ನು ಸಿಸಿಬಿ ಮುಖ್ಯಸ್ಥರನ್ನಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಿದ ನಂತರ ಆ ಸ್ಥಾನಕ್ಕೆ ಬೇರೊಬ್ಬರ ನೇಮಕವಾಗಿರಲಿಲ್ಲ. 

ಈ ತಿಂಗಳ 10ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.