ಗುರ್ಗಾಂವ್'ನಲ್ಲಿರುವ ರ್ಯಾನ್ ಅಂತರಾಷ್ಟ್ರೀಯ ಶಾಲೆಯಲ್ಲಿ ನಿನ್ನೆ 2 ನೇ ವಿದ್ಯಾರ್ಥಿ ಮೃತಪಟ್ಟಿದ್ದು ಎರಡನೇ ದಿನವಾದ ಇಂದು ನೂರಾರು ಪೋಷಕರು ಶಾಲೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ.
ನವದೆಹಲಿ (ಸೆ.09): ಗುರ್ಗಾಂವ್'ನಲ್ಲಿರುವ ರ್ಯಾನ್ ಅಂತರಾಷ್ಟ್ರೀಯ ಶಾಲೆಯಲ್ಲಿ ನಿನ್ನೆ 2 ನೇ ವಿದ್ಯಾರ್ಥಿ ಮೃತಪಟ್ಟಿದ್ದು ಎರಡನೇ ದಿನವಾದ ಇಂದು ನೂರಾರು ಪೋಷಕರು ಶಾಲೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ.
ನಿನ್ನೆ ಬೆಳಿಗ್ಗೆ ಶಾಲಾ ಶೌಚಾಲಯದಲ್ಲಿ 2 ನೇ ತರಗತಿ ವಿದ್ಯಾರ್ಥಿಯ ಮೃತಹೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಲೈಂಗಿಕ ದೌರ್ಜನ್ಯ ಪ್ರಯತ್ನದಲ್ಲಿ ವಿಫಲವಾಗಿದ್ದಕ್ಕೆ ಹತ್ಯೆ ಮಾಡಿದ್ದೇನೆ ಎಂದು ಬಸ್ ಕಂಡಕ್ಟರ್ ಅಶೋಕ್ ತಪ್ಪೊಪ್ಪಿಗೆ ನೀಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ.
ರ್ಯಾನ್ ಅಂತರಾಷ್ಟ್ರೀಯ ಶಾಲೆಯ 2 ನೇ ತರಗತಿ ಬಾಲಕನ ಹತ್ಯೆ ಸಂಬಂಧವಾಗಿ ವಿಚಾರಣೆ ನಡೆಸಲು ತಂಡವನ್ನು ರಚಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯಿಸಿದ್ದಾರೆ. ವಿದ್ಯಾರ್ಥಿಗಳ ಭದ್ರತೆ ಕುರಿತಂತೆ ಸಿಬಿಎಸ್'ಇ ಶಾಲೆಯಿಂದ ವರದಿ ಕೇಳಿದೆ.
(ಚಿತ್ರಕೃಪೆ: ಹಿಂದೂಸ್ಥಾನ್ ಟೈಮ್ಸ್)
