ಆಧಾರ್‌ ಸಂಖ್ಯೆಯನ್ನು ‘ಪಾನ್‌' ಕಾರ್ಡ್‌ನೊಂದಿಗೆ ಸಂಯೋಜಿಸುವುದನ್ನು ಜುಲೈ 1ರಿಂದ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಇನ್ನೂ ಪಾನ್‌ ಸಂಖ್ಯೆಯೊಂದಿಗೆ ಆಧಾರ್‌ ಸಂಖ್ಯೆ ಸಂಯೋಜಿಸದೇ ಇದ್ದವರಿಗೆ, ಸಂಯೋಜನೆಗೆ ಇನ್ನು ಎರಡು ದಿನ ಮಾತ್ರವೇ ಬಾಕಿ ಉಳಿದಂತಾಗಿದೆ. ಒಂದು ವೇಳೆ ಎರಡು ದಿನದಲ್ಲಿ ಸಂಯೋಜಿಸದೇ ಇದ್ದಲ್ಲಿ ಪಾನ್‌ ನಂಬರ್‌ ಅನೂರ್ಜಿತಗೊಳ್ಳಲಿದ್ದು, ಯಾವುದೇ ದೊಡ್ಡ ಹಣಕಾಸು ವಹಿವಾಟು ನಡೆಸುವುದು ಅಸಾಧ್ಯವಾಗಲಿದೆ. ಪಾನ್‌ಗೆ ಆಧಾರ್‌ ಸಂಯೋಜನೆ ಕುರಿತು ಕಳೆದ ಬಜೆಟ್‌ನಲ್ಲೇ ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು. ಆ ಕುರಿತು ಮಂಗಳವಾರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಜುಲೈ 1ರಿಂದ ಪಾನ್‌ ಸಂಖ್ಯೆಗೆ ಅರ್ಜಿ ಸಲ್ಲಿಸುವವರು ಮತ್ತು ಅಂದಿನಿಂದ ಪಾನ್‌ ಸಂಖ್ಯೆ ಪಡೆಯುವವರು ಕಡ್ಡಾಯವಾಗಿ ಆದಾಯ ತೆರಿಗೆ ಮಹಾನಿರ್ದೇಶಕರಿಗೆ ಆಧಾರ್‌ ಸಂಖ್ಯೆಯ ಮಾಹಿತಿ ನೀಡಬೇಕು.
ಆಧಾರ್ ಸಂಖ್ಯೆಯನ್ನು ‘ಪಾನ್' ಕಾರ್ಡ್ನೊಂದಿಗೆ ಸಂಯೋಜಿಸುವುದನ್ನು ಜುಲೈ 1ರಿಂದ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಇನ್ನೂ ಪಾನ್ ಸಂಖ್ಯೆಯೊಂದಿಗೆ ಆಧಾರ್ ಸಂಖ್ಯೆ ಸಂಯೋಜಿಸದೇ ಇದ್ದವರಿಗೆ, ಸಂಯೋಜನೆಗೆ ಇನ್ನು ಎರಡು ದಿನ ಮಾತ್ರವೇ ಬಾಕಿ ಉಳಿದಂತಾಗಿದೆ. ಒಂದು ವೇಳೆ ಎರಡು ದಿನದಲ್ಲಿ ಸಂಯೋಜಿಸದೇ ಇದ್ದಲ್ಲಿ ಪಾನ್ ನಂಬರ್ ಅನೂರ್ಜಿತಗೊಳ್ಳಲಿದ್ದು, ಯಾವುದೇ ದೊಡ್ಡ ಹಣಕಾಸು ವಹಿವಾಟು ನಡೆಸುವುದು ಅಸಾಧ್ಯವಾಗಲಿದೆ. ಪಾನ್ಗೆ ಆಧಾರ್ ಸಂಯೋಜನೆ ಕುರಿತು ಕಳೆದ ಬಜೆಟ್ನಲ್ಲೇ ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು. ಆ ಕುರಿತು ಮಂಗಳವಾರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಜುಲೈ 1ರಿಂದ ಪಾನ್ ಸಂಖ್ಯೆಗೆ ಅರ್ಜಿ ಸಲ್ಲಿಸುವವರು ಮತ್ತು ಅಂದಿನಿಂದ ಪಾನ್ ಸಂಖ್ಯೆ ಪಡೆಯುವವರು ಕಡ್ಡಾಯವಾಗಿ ಆದಾಯ ತೆರಿಗೆ ಮಹಾನಿರ್ದೇಶಕರಿಗೆ ಆಧಾರ್ ಸಂಖ್ಯೆಯ ಮಾಹಿತಿ ನೀಡಬೇಕು.
ಈಗಾಗಲೇ ಪಾನ್ ಸಂಖ್ಯೆ ಹೊಂದಿರುವವರು ಆನ್ಲೈನ್ ಮೂಲಕ ಆಧಾರ್ ಸಂಯೋಜಿಸುವ ಕಾರ್ಯ ನಡೆಯುತ್ತಿದ್ದು, 2.07 ಕೋಟಿ ತೆರಿಗೆದಾರರು ಆಧಾರ್ ಸಂಯೋಜಿಸಿದ್ದಾರೆ. ಆಧಾರ್ ಸಂಖ್ಯೆಯನ್ನು 115 ಕೋಟಿ ಜನ ಹೊಂದಿದ್ದರೆ, ಪಾನ್ ಸಂಖ್ಯೆ 25 ಕೋಟಿ ಜನರ ಬಳಿ ಇದೆ.
ಪಾನ್ಗೆ ಆಧಾರ್ ಲಿಂಕ್ ಹೇಗೆ?
ಆದಾಯ ತೆರಿಗೆ ಇಲಾಖೆಯ htpps://incometaxindiaefiling.gov.in/ ವೆಬ್ಸೈಟ್ ತೆರೆಯಿರಿ. ಎಡಭಾಗದಲ್ಲಿ ಲಿಂಕ್ ಹಿಯರ್ ಎಂಬ ಸೂಚನೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಪಾನ್, ಆಧಾರ್ನಲ್ಲಿ ಇರುವ ಹೆಸರು, ಹುಟ್ಟಿದ ದಿನಾಂಕ, ಆಧಾರ್ ನಂಬರ್ ದಾಖಲಿಸಿ, ಕೆಳಗೆ ನೀಡಿರುವ ಕ್ಯಾಪ್ಚಾ ತುಂಬಬೇಕು. ನಂತರ ಸಬ್ಮಿಟ್ ಬಟನ್ಒತ್ತಿದರೆ, ಪಾನ್ ಜೊತೆ ಆಧಾರ್ ಲಿಂಕ್ ಆಗಿರುವ ಬಗ್ಗೆ ಸಂದೇಶ ಬರುತ್ತದೆ.
ಆಧಾರ್ ಮಾಹಿತಿ ದುರ್ಬಳಕೆ ತಡೆಯಲು ‘ಲಾಕ್' ಮಾಡಿ
ಇತ್ತೀಚೆಗೆ ಆಧಾರ್ ಮಾಹಿತಿ ದುರ್ಬಳಕೆ ಆಗುತ್ತಿದೆ ಎಂಬ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಈ ಮಾಹಿತಿಯನ್ನು ಯಾರೂ ಕದಿಯದಂತೆ ಸುರಕ್ಷಿತವಾಗಿಡಲು ಆಧಾರ್ ಪ್ರಾಧಿಕಾರವು ತನ್ನ ವೆಬ್ಸೈಟ್ನಲ್ಲಿ ಅವಕಾಶ ಕಲ್ಪಿಸಿದೆ. ಆಧಾರ್ ವೆಬ್ಸೈಟ್ಗೆ ಹೋಗಿ ಆಧಾರ್ ಸಂಖ್ಯೆ, ಬಳಿಕ ಸೆಕ್ಯುರಿಟಿ ಕೋಡ್ ಹಾಗೂ ಕ್ಯಾಪ್ಚಾ ದಾಖಲಿಸಬೇಕು.
