ಬಾವಲಿಗಳ ವಾಸಸ್ಥಾನ ನಾಶವೇ ನಿಫಾ ವೈರಸ್‌ಗೆ ಕಾರಣ: ವರದಿ

First Published 24, May 2018, 10:05 AM IST
How outbreak of Nipah Virus
Highlights

ಕೇರಳದಲ್ಲಿ ನಿಫಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಈ ಸಮಸ್ಯೆ ಎದುರಾಗಿರುವುದಕ್ಕೆ ಮಾನವನೇ ಕಾರಣ ಎಂಬ ಅಂಶಗಳನ್ನು ತಜ್ಞರು ಬಹಿರಂಗ ಪಡಿಸಿದ್ದಾರೆ. ಬಾವಲಿಗಳಿಂದ ಹರಡುವ ಈ ಕಾಯಿಲೆಗೆ ಕಾರಣ, ಬಾವಲಿಗಳ ವಾಸಸ್ಥಾನ ನಾಶ ಮತ್ತು ಹವಾಮಾನ ಬದಲಾವಣೆ ಕಾರಣ ಎಂದು ಜಾಗತಿಕ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಲಾಗಿದೆ.

ಕೊಚ್ಚಿ: ಕೇರಳದಲ್ಲಿ ನಿಫಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಈ ಸಮಸ್ಯೆ ಎದುರಾಗಿರುವುದಕ್ಕೆ ಮಾನವನೇ ಕಾರಣ ಎಂಬ ಅಂಶಗಳನ್ನು ತಜ್ಞರು ಬಹಿರಂಗ ಪಡಿಸಿದ್ದಾರೆ. ಬಾವಲಿಗಳಿಂದ ಹರಡುವ ಈ ಕಾಯಿಲೆಗೆ ಕಾರಣ, ಬಾವಲಿಗಳ ವಾಸಸ್ಥಾನ ನಾಶ ಮತ್ತು ಹವಾಮಾನ ಬದಲಾವಣೆ ಕಾರಣ ಎಂದು ಜಾಗತಿಕ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಲಾಗಿದೆ.

ಬಾವಲಿ ಸಂಬಂಧಿತ ವೈರಲ್‌ ಸೋಂಕಿನಿಂದ ಹರಡುತ್ತಿರುವ ರೋಗಕ್ಕೆ ಪ್ರಾಣಿಗಳ ನೈಸರ್ಗಿಕ ವಾಸಸ್ಥಾನಗಳು ನಾಶವಾಗಿರುವುದೇ ಕಾರಣ ಎಂಬುದಕ್ಕೆ ಬಲವಾದ ಸಾಕ್ಷ್ಯಗಳಿವೆ ಎಂದು ವರದಿ ಪ್ರತಿಪಾದಿಸಿದೆ. ಮಾನವನ ಚಟುವಟಿಕೆಗಳಿಂದಾಗಿ ಬಾವಲಿಗಳ ವಾಸಸ್ಥಾನ ನಾಶವಾಗಿರುವರಿಂದ, ಅವುಗಳು ಹಸಿವಿನಿಂದ ಒತ್ತಡಕ್ಕೊಳಗಾಗುತ್ತಿವೆ. ಅವುಗಳ ರೋಗ ನಿರೋಧಕ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ಹೀಗಾಗಿ ಅವುಗಳ ವೈರಸ್‌ ಪ್ರಮಾಣ ಏರಿಕೆಯಾಗಿ, ತುಂಬಾ ವೈರಸ್‌ ಅವುಗಳ ಮೂತ್ರ ಮತ್ತು ಜೊಲ್ಲುರಸದಲ್ಲಿ ಹೊರಸೂಸುತ್ತದೆ ಎಂದು ವರದಿ ತಿಳಿಸಿದೆ.

ನಿಫಾ ವೈರಸ್‌ ಹರಡುವಿಕೆಯಲ್ಲಿ ಸಂತಾನೋತ್ಪತ್ತಿ ಮತ್ತು ಹಸಿವಿನ ಸಮಸ್ಯೆ ಪ್ರಮುಖವಾದುದು. ಬಾಂಗ್ಲಾದೇಶದಲ್ಲಿ ನಿಫಾ ವೈರಸ್‌ ಸಮಸ್ಯೆ ಉದ್ಭವಾಗಿದ್ದಾಗ ಕೆನಡಾದ ಸಸ್ಕಾಚೆವನ್‌ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ಅಂಶಗಳು ತಿಳಿದುಬಂದಿವೆ ಎಂದು ವರದಿ ತಿಳಿಸಿದೆ.

loader