ಎಡಪಂಥೀಯರು ಆ ಹಣವನ್ನು ನಕ್ಸಲ್ ಮುಂತಾದ ದೇಶದ್ರೋಹದ ಸಂಘಟನೆಗಳಿಗೆ ಉಪಯೋಗಿಸುತ್ತಾರೆ ಎಂದು ಇದೇ ರೀತಿಯ ಹಲವು ವಿರೋಧದ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಕೊಚ್ಚಿ[ಆ.20]: 'ಕೇರಳಿಗರು ಅಯೋಗ್ಯರು ಅವರ ರಾಜ್ಯಕ್ಕೆ ಪರಿಹಾರ ಏಕೆ ನೀಡುತ್ತೀರಿ..?' ಎಂದು ಸಂಘ ಪರಿವಾರದವರು ಹೇಳಿದ್ದಾರೆನ್ನಲಾದ ವದಂತಿಯ ಪ್ರಚಾರಗಳಿಗೆ ಹಿಂದೂ ದೇಗುಲದ ಟ್ರಸ್ಟ್ ತಕ್ಕ ಪ್ರತಿಕ್ರಿಯೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರ್ನಾಕುಲಂನ ಕೀಳಿಲಂ ಕನ್ಯಾಸಿರಿ ವಿಷ್ಣು ದೇಗುಲದ ಟ್ರಸ್ಟ್'ನಲ್ಲಿದ್ದ ಹುಂಡಿಗೆ ಹಾಕಿದ ಹಣವನ್ನು ಮುಖ್ಯಮಂತ್ರಿ ನೈಸರ್ಗಿಕ ಪರಿಹಾರ ನಿಧಿಗೆ ಅರ್ಪಿಸಿದೆ.

ಕೇರಳಿಗರು ಪರಿಹಾರ ಸ್ವೀಕರಿಸಲು ಯೋಗ್ಯರಲ್ಲ. ಅವರಿಗೆ ಹಣ ನೀಡಬೇಡಿ. ಪರಿಹಾರ ಕಾರ್ಯ ಕೈಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಎಡಪಂಥೀಯರು ಆ ಹಣವನ್ನು ನಕ್ಸಲ್ ಮುಂತಾದ ದೇಶದ್ರೋಹಿ ಕಾರ್ಯಕ್ಕೆ ಬಳಸುತ್ತಾರೆಂದು, ಸಂಘ ಪರಿವಾರದ ಮುಖ್ಯಸ್ಥರು ಹೇಳಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿದ್ದವು.

ದೇಗುಲದ ಪ್ರಧಾನ ಅರ್ಚಕರಾದ ದೇವಿಕಾರಣ್ ನಂಬೂದರಿ ಅಧಿಕೃತವಾಗಿ ಟ್ರಸ್ಟ್ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದು, ತಾವು ಇಂಥ ಸಂದೇಶಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ರಾಜ್ಯವನ್ನು ಮೊದಲಿನ ಸ್ಥಿತಿಯತ್ತ ಕೊಂಡೊಯ್ಯುವಲ್ಲಿ ಶ್ರಮಿಸೋಣ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.