ಇದು ಮಳೆಗಾಲವಾಗಿದ್ದು,  ಮುಂಚಿತವಾಗಿ ಹವಾಮಾನದ ಬಗ್ಗೆ ಮಾಹಿತಿ ಇದ್ದಲ್ಲಿ  ಸುರಕ್ಷಿತವಾಗಿ ಇರಬಹುದು.  ಇಲ್ಲವಾದಲ್ಲಿ ಏಕಾಏಕಿ ಬರುವ ಮಳೆ - ಸಿಡಿಲಿನಿಂದ ಪ್ರಾಣಾಪಾಯ ಸಂಭವಿಸಬಹುದು.  ಇಂತಹ ಹವಾಮಾನ ವರದಿ ನೀಡುವಲ್ಲಿ  ನಮ್ಮ ದೇಶದ ಹೆಮ್ಮೆಯ ಇಸ್ರೋ ಪ್ರಮುಖ ಪಾತ್ರ ವಹಿಸುತ್ತದೆ. ಹೇಗೆ ಗೊತ್ತಾ..?

ನವದೆಹಲಿ : ಇದು ಮಳೆಗಾಲವಾಗಿದ್ದು, ಮುಂಚಿತವಾಗಿ ಹವಾಮಾನದ ಬಗ್ಗೆ ಮಾಹಿತಿ ಇದ್ದಲ್ಲಿ ಸುರಕ್ಷಿತವಾಗಿ ಇರಬಹುದು. ಇಲ್ಲವಾದಲ್ಲಿ ಏಕಾಏಕಿ ಬರುವ ಮಳೆ - ಸಿಡಿಲಿನಿಂದ ಪ್ರಾಣಾಪಾಯ ಸಂಭವಿಸಬಹುದು. ಇಂತಹ ಹವಾಮಾನ ವರದಿ ನೀಡುವಲ್ಲಿ ನಮ್ಮ ದೇಶದ ಹೆಮ್ಮೆಯ ಇಸ್ರೋ ಪ್ರಮುಖ ಪಾತ್ರ ವಹಿಸುತ್ತದೆ. ಹೇಗೆ ಗೊತ್ತಾ..?

ಅಹಮದಾಬಾದ್ ಸ್ಪೇಸ್ ಸೆಂಟರ್ ಹಾಗೂ ಹೈದ್ರಾಬಾದ್ ರಿಮೋಟ್ ಸೆನ್ಸಿಂಗ್ ಕೇಂದ್ರದ ಮೂಲಕ ಸ್ಯಾಟಲೈಟ್ ಡೇಟಾವನ್ನು ಇಸ್ರೋ ಸಂಗ್ರಹಿಸುತ್ತದೆ. ಮೊದಲು ಹವಾಮಾನದ ಬಗ್ಗೆ ಸಂಗ್ರಹಿಸಿದ 2 ಕೇಂದ್ರಗಳ ಅಂಕಿ ಅಂಶಗಳನ್ನು ತಾಳೆ ಹಾಕುತ್ತದೆ. ನಂತರ ಸೂಕ್ತ ಮಾಹಿತಿಯನ್ನು ಹವಾಮಾನ ಇಲಾಖೆಗೆ ವರ್ಗಾಯಿಸುತ್ತದೆ.  ಇಸ್ರೋವಿನ ಈ ತಂತ್ರಜ್ಞಾನದಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಹೆಚ್ಚು ಸಹಕಾರಿಯಾಗಲಿದೆ. ಇಷ್ಟು ದಿನ ಹವಾಮಾನ ಇಲಾಖೆ ನಿಖೆರ ಮಾಹಿತಿ ನೀಡುವಲ್ಲಿ ವಿಫಲವಾಗುತ್ತಿತ್ತು. 

ಆದರೆ ಈ ಇಸ್ರೋ ಆಧುನಿಕ ತಂತ್ರಜ್ಞಾನದಿಂದ ನೀಡುವ ಹವಾಮಾನ ಮಾಹಿತಿ ನಿಖರವಾಗಿದ್ದು ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಲ್ಳುವಲ್ಲಿಯೂ ನೆರವಾಗುತ್ತಿದೆ. ಸಂಭವಿಸಬಹುದಾದ ನೈಸರ್ಗಿಕ ವಿಕೋಪಗಳ ಬಗ್ಗೆ ಹೆಚ್ಚು ಜಾಗೃತವಾಗಿರಲು ಇಸ್ರೋ ಸಹಕಾರಿ.