Asianet Suvarna News Asianet Suvarna News

ನಿಮ್ಮ ಆರ್ಥಿಕ ಅಭಿವೃದ್ಧಿಗೆ ಇಟಿ'ಎಫ್'ಗಳಿಂದ ಆಗುವ ಪ್ರಯೋಜನಗಳು

ನೀವು ಯಾವುದೇ ಅಧಿಕೃತ ಹೂಡಿಕೆದಾರರ ಡಿಮ್ಯಾಟ್  ಖಾತೆಯ ಮೂಲಕ ಇ'ಎಫ್'ಟಿಗಳನ್ನು ಹೂಡಿಕೆ ಮಾಡಬಹುದು. ಷೇರುಗಳ ವಹಿವಾಟಿನ ಹೂಡಿಕೆ ಹಾಗೂ ವರ್ಗಾವಣೆಗೆ  ನಿಮಗೊಂದು ಡಿಮ್ಯಾಟ್, ವ್ಯವಹಾರ ಹಾಗೂ ಬ್ಯಾಂಕಿಂಗ್ ಖಾತೆಯ ಅಗತ್ಯವಿದೆ. ಬಹುತೇಕ ಹೂಡಿಕೆದಾರರು ಒಂದೇ ಖಾತೆಯಲ್ಲಿ ಮೂರನ್ನು ತೆರೆಯುತ್ತಾರೆ. 

HOW ETFS HELP YOU BUILD WEALTH

ವಿನಿಮಯ ವ್ಯವಹಾರಗಳ ನಿಧಿ ಅಥವಾ ಇಎಫ್'ಟಿಗಳು ಷೇರು ವಿನಿಮಯಗಳ ವ್ಯವಹಾರಗಳ ರೀತಿಯಲ್ಲಿ ಮಾರುಕಟ್ಟೆ ಭದ್ರತೆ ಒದಗಿಸುತ್ತವೆ.  ಚಿನ್ನ, ಸ್ವತ್ತು ಅಥವಾ ನಿಗದಿತ ವಸ್ತುಗಳ ರೀತಿಯಲ್ಲಿ   ಇಎಫ್'ಟಿ ಅಡಿಯಲ್ಲಿ ಷೇರುಗಳ ರೀತಿಯಲ್ಲಿ ಇ'ಎಫ್'ಟಿ'ಗಳು ಒಳಗೊಂಡಿರುತ್ತವೆ.

ಉದಾಹರಣೆಗೆ  ನಿಫ್ಟಿ ಅಥವಾ ಸೆನ್ಸೆಕ್ಸ್ ಸೂಚಿಗಳ ಸಂಯೋಜನೆಯನ್ನು ಅನುಕರಿಸಬಲ್ಲವು. ಅಂದರೆ ಪೂರ್ವ ನಿರ್ಧಾರಿತ ಸೂಚ್ಯಂಕಗಳ ರೀತಿಯಲ್ಲಿ ನಿಮ್ಮ ನಿಧಿಗಳಿಗೆ ಭದ್ರತೆ ಒದಗಿಸುತ್ತವೆ. ಇಎಫ್'ಟಿಗಳು ತೆರೆದ ಮ್ಯೂಚುಯಲ್ ಫಂಡ್ ರೀತಿಯಲ್ಲಿ  ಸಹ ಒಂದು ನಿರ್ದಿಷ್ಟವಾದ ಸೂಚ್ಯಾಂಕಗಳ ಷೇರುಗಳ ಮಾನದಂಡಗಳಂತೆ.

ಇಎಫ್'ಟಿಗಳ ಹೂಡಿಕೆ ಆರಂಭಿಸುವುದು ಹೇಗೆ

ನೀವು ಯಾವುದೇ ಅಧಿಕೃತ ಹೂಡಿಕೆದಾರರ ಡಿಮ್ಯಾಟ್  ಖಾತೆಯ ಮೂಲಕ ಇ'ಎಫ್'ಟಿಗಳನ್ನು ಹೂಡಿಕೆ ಮಾಡಬಹುದು. ಷೇರುಗಳ ವಹಿವಾಟಿನ ಹೂಡಿಕೆ ಹಾಗೂ ವರ್ಗಾವಣೆಗೆ  ನಿಮಗೊಂದು ಡಿಮ್ಯಾಟ್, ವ್ಯವಹಾರ ಹಾಗೂ ಬ್ಯಾಂಕಿಂಗ್ ಖಾತೆಯ ಅಗತ್ಯವಿದೆ. ಬಹುತೇಕ ಹೂಡಿಕೆದಾರರು ಒಂದೇ ಖಾತೆಯಲ್ಲಿ ಮೂರನ್ನು ತೆರೆಯುತ್ತಾರೆ. 

ಒಮ್ಮೆ ನೀವು ಈ ಖಾತೆಗಳನ್ನು ತೆರೆದರೆ, ಷೇರುಗಳು ಹಾಗೂ ಇ'ಎಫ್'ಟಿಗಳನ್ನು ಹೂಡಿಕೆ ಮಾಡುವುದಕ್ಕೆ ಆರಂಭಿಸಲು ನಿಮ್ಮ ಉಳಿತಾಯ ಖಾತೆಯಿಂದ ವಹಿವಾಟು ಖಾತೆಗೆ ವರ್ಗಾಯಿಸಬಹುದು.

ಇಎಫ್'ಟಿ'ಗಳಿಗೆ ತೆರಿಗೆಗಳು

ಸಾಮಾನ್ಯ ತೆರಿಗೆಗಳಂತೆ ಇಎಫ್'ಟಿ'ಗಳಿಗೆ ತೆರಿಗೆ ವಿಧಿಸಲಾಗುತ್ತದೆ.  ಹೂಡಿಕೆ ಅಧಿಕಾರಾವಧಿ ಒಂದು ವರ್ಷಕ್ಕಿಂತಲೂ ದೀರ್ಘಾವಧಿ ಎಂದು ಪರಿಗಣಿಸಲಾಗಿದೆ. ಅಲ್ಪಾವಧಿಯ ಬಂಡವಾಳವು ಶೇ.15 ರಷ್ಟು  ತೆರಿಗೆಯಿದೆ.  ದೀರ್ಘಾವಧಿ ಬಂಡವಾಳಗಳ ಲಾಭಕ್ಕೆ ವಿನಾಯಿತಿ ನೀಡಲಾಗುತ್ತದೆ.

ಅತ್ಯಂತ ಜನಪ್ರಿಯ ಇಟಿಎಫ್'ಟಿಗಳಲ್ಲಿ  ಚಿನ್ನದ ಇಟಿಎಫ್ ಪ್ರಮುಖವಾಗಿದ್ದು, ಅಲ್ಲದೆ ಇದಕ್ಕೆ ತೆರಿಗೆ ನಿಯಮಾವಳಿಗಳು ವಿಭಿನ್ನವಾಗಿರುತ್ತವೆ. ಎಸ್'ಟಿ'ಸಿಜಿ  ಸಂದರ್ಭದಲ್ಲಿ, ಬಂಡವಾಳ ಗಳಿಕೆ ಆದಾಯಕ್ಕೆ ಸೇರ್ಪಡೆಗೊಳ್ಳುತ್ತದೆ ಮತ್ತು ತೆರಿಗೆ ಸ್ಲ್ಯಾ'ಬ್ ಪ್ರಕಾರ ಅನ್ವಯಿಸುತ್ತದೆ. ದೀರ್ಘಕಾಲೀನ ಬಂಡವಾಳ ಲಾಭವನ್ನು ಸೂಚ್ಯಂಕದ ಲಾಭದೊಂದಿಗೆ ಶೇ.20 ರಷ್ಟು ತೆರಿಗೆ ವಿಧಿಸಲಾಗುತ್ತದೆ. ದೀರ್ಘಾವಧಿಯ ಚಿನ್ನದ ಇಟಿಎಫ್'ಟಿಗಳಿಗೆ ಮೂರು ವರ್ಷಗಳಿಗಿಂತಲೂ ಹೆಚ್ಚು ಅವಧಿಯೆಂದು ವ್ಯಾಖ್ಯಾನಿಸಲಾಗಿದೆ.

ಇಎಫ್'ಟಿಗಳ ಅನುಕೂಲಗಳು

ಬಹುತೇಕ ಇಟಿಎಎಫ್'ಗಳು ಸೂಚ್ಯಂಕಗಳನ್ನು ಅನುಸರಿಸುವುದರಿಂದ, ಆದಾಯವು ಆಧಾರವಾಗಿರುವ ಸೂಚ್ಯಂಕಗಳನ್ನು ಹೊಂದಿಸುತ್ತದೆ.ಅಂತಹ ಸಂದರ್ಭಗಳಲ್ಲಿ, ಸ್ವೀಕರಿಸಿದ ಎಲ್ಲಾ ಹಣವನ್ನು ನಗದು ಇಲ್ಲದೆ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಸಕ್ರಿಯವಾಗಿ ನಿರ್ವಹಿಸಲಾದ ನಿಧಿಸಂಸ್ಥೆಗಳಲ್ಲಿ, ನಿಧಿಯ ವ್ಯವಸ್ಥಾಪಕರು ವ್ಯಕ್ತಿಯ ಕಾರ್ಯಕ್ಷಮತೆಯ ವಿಶ್ಲೇಷಣೆಯ ಆಧಾರದ ಮೇಲೆ ಆಧಾರವಾಗಿರುವ ಕಂಪೆನಿಗಳನ್ನು ಕಲೆಹಾಕುತ್ತಾರೆ. ಮ್ಯೂಚುಯಲ್ ಫಂಡ್'ಗಳನ್ನು ಸಮರ್ಥ ವ್ಯವಸ್ಥಾಪಕರು ನಡೆಸುತ್ತಿರುವಾಗ, ನಿಮ್ಮ ಮಾರುಕಟ್ಟೆ ರಿರ್ಟ್'ರ್ನ್ಸ್'ಗಳಿಗೆ ಅಂತಹ ತೊಂದರೆಯಾಗುವುದಿಲ್ಲ. ಇದಲ್ಲದೆ ನಿಧಿ ವ್ಯವಸ್ಥಾಪಕರು ನಗದು ಅಥವಾ ಲಿಕ್ವಿಡ್ ಹೂಡಿಕೆಗಳನ್ನು ಲಾಭಗಳಿಸುವ ಪ್ರತಿ ಸಣ್ಣಪುಟ್ಟ ರಿಟರ್ನ್'ಗಳಲ್ಲಿ ಇಟ್ಟುಕೊಳ್ಳುತ್ತಾರೆ. ಇಎಫ್'ಟಿಗಳು ಇಂದು ಹಲವು ಸ್ವತ್ತುಗಳ ವಿಭಾಗಗಳನ್ನು ಒಳಗೊಂಡಿರುತ್ತದೆ. ಪ್ರಮುಖವಾಗಿ,  ಚಿನ್ನ, ನಿಫ್ಟಿ, ಟಾಪ್ 100, ಟಾಪ್ 200, ಬ್ಯಾಂಕಿಂಗ್ ಕ್ಷೇತ್ರ, ನಿಫ್ಟಿ ನಂತರದ ಮುಂದಿನ 50 ಸಂಸ್ಥೆಗಳು ಸೇರಿದಂತೆ ಹೆಚ್ಚಿನವುಗಳನ್ನು ಆಧರಿಸಿವೆ.

ಇದಲ್ಲದೆ, ಹೆಚ್ಚಿನ ಮ್ಯೂಚುಯಲ್ ಫಂಡ್'ಗಳಿಗೆ ಹೋಲಿಸಿದರೆ ಇಟಿಎಫ್'ಗಳಲ್ಲಿನ ವೆಚ್ಚ ಅನುಪಾತವು ಕಡಿಮೆಯಿದೆ. ಇಟಿಎಫ್'ಟಿಗಳು ಸೂಚಿಯನ್ನು ಟ್ರ್ಯಾಕ್ ಮಾಡಿದ ನಂತರ, ನಿಧಿ ವ್ಯವಸ್ಥಾಪಕ ನಿಧಿ ಬಂಡವಾಳಕ್ಕಾಗಿ ಹೊಸ ಅವಕಾಶಗಳನ್ನು ಸಕ್ರಿಯವಾಗಿ ಹುಡುಕುವ ಅವಕಾಶವಿಲ್ಲ. ಯಾವುದೇ ಕಂಪನಿ ಸೂಚಾಂಕ್ಯದ ಹೊರಗೆ ಹೋಗಬೇಕಾದರೆ ಅದು ತಾನಾಗಿಯೇ ಇ'ಎಫ್'ಟಿಯಿಂದ ಹೊರಹೋಗುತ್ತದೆ. ಅಂತಿಮವಾಗಿ, ಕೆಲವೊಂದು  ನಿಧಿ ಸಂಸ್ಥೆಗಳು ವಿದೇಶಿ ಸೂಚ್ಯಂಕಗಳ ಆಧಾರದ ಮೇಲೆ ಇಟಿಎಫ್'ಟಿಗಳನ್ನು ಕೂಡಾ ನೀಡುತ್ತವೆ. ಈ ರೀತಿಯ ಇಟಿಎಫ್'ಗಳ ಮೂಲಕ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು.

ಇ'ಟಿಎಫ್'ನ ಅನಾನುಕೂಲತೆ'ಗಳು

ಇಟಿಎಫ್'ನ ಪ್ರಮುಖ ಅನಾನುಕೂಲತೆಯೆಂದರೆ ನಿಯಮಿತ ಮ್ಯೂಚುವೆಲ್ ಫಂಡ್'ಗಳಿಗೆ ಹೋಲಿಕೆ ಮಾಡಿದರೆ ನಿಧಿಗಳ ಲಭ್ಯತೆ ಸೀಮಿತ ಆಯ್ಕೆಯದಾಗಿದೆ. ಭಾರತದಲ್ಲಿ ಕೆಲವು ಡಜನ್ ಇಟಿಎಫ್'ಳಿದ್ದರೆ, ಮ್ಯೂಚುಯಲ್ ಫಂಡ್ ಯೋಜನೆಗಳು ಸಾವಿರಾರು ಸಂಖ್ಯೆಯಲ್ಲಿದೆ. ಆದ್ದರಿಂದ, ಇಟಿಎಫ್'ಗಳಲ್ಲಿನ ನಿಮ್ಮ ಆಯ್ಕೆಗಳು ಸೀಮಿತವಾಗಿವೆ.

ಇದು ಇತರ ಪರಿಣಾಮಗಳಿಗೆ ಕಾರಣವಾಗುತ್ತದೆ: ಹೊಸ ಕೈಗಾರಿಕೆಗಳು, ಉದಯೋನ್ಮುಖ ಕಂಪನಿಗಳು ಅಥವಾ ಉದಯೋನ್ಮುಖ ಥೀಮ್-ಆಧಾರಿತ ನಿಧಿಗಳಲ್ಲಿ ನೀವು ಹೂಡಿಕೆ ಮಾಡುವಂತಿಲ್ಲ. ನೀವು ಹೆಚ್ಚಾಗಿ ಸೂಚ್ಯಂಕ ಆಧಾರಿತ ಹಣವನ್ನು ಅವಲಂಬಿಸಬೇಕಾಗಿದೆ. ಒಂದು ಸೂಚ್ಯಂಕವು ದೊಡ್ಡದ್ದಾಗಿ, ಆರ್ಥಿಕ ಬಲವಾದ ಮತ್ತು ಸ್ಥಿರವಾದ ಸಂಸ್ಥೆಗಳನ್ನೊಳಗೊಂಡಿದ್ದು, ಬೆಳೆಯುವ ಕಂಪನಿಗಳು ಸಾಮಾನ್ಯವಾಗಿ ಹೊರಗುಳಿಯುತ್ತವೆ. ಅಂತಿಮವಾಗಿ, ಇಟಿಎಫ್  ಅವಕಾಶಗಳು ಈಗ ಹಲವಾರು ವಲಯಗಳಿಂದ ಅಂದರೆ ಉತ್ಪಾದನೆ, ರಿಯಲ್ ಎಸ್ಟೇಟ್ ಇತರೆ ವಲಯಗಳಿಂದ ದೂರಸರಿದಿವೆ.

ಇವುಗಳು ಮ್ಯೂಚುಯಲ್ ಫಂಡ್ ಮಾರುಕಟ್ಟೆಯನ್ನು ಹೊರತುಪಡಿಸಿ ಕಡಿಮೆ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಇಟಿಎಫ್ ಮಾರುಕಟ್ಟೆ ವಲಯವು ಹೂಡಿಕೆದಾರರು ತಾವು ಬಯಸುವ ಆಯ್ಕೆಗಳನ್ನು ಸೇರಿಸಲು ಮತ್ತು ಒದಗಿಸುವವರೆಗೆ ಅವಕಾಶವಿಲ್ಲದಂತೆ ವಿಕಸನಗೊಳ್ಳುತ್ತದೆ. ಆದಾಗ್ಯೂ, ಕಡಿಮೆ ಬಂಡವಾಳ ವೆಚ್ಚದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಮುಂತಾದ ಸೂಚ್ಯಂಕಗಳ ಬೆಳವಣಿಗೆಯನ್ನು ಅನುಕರಿಸಲು ಬಯಸುವ ಹೂಡಿಕೆದಾರರು ಅಥವಾ ತೊಂದರೆಯ ಸಂದರ್ಭಗಳಲ್ಲಿ ಭೌತಿಕ ಚಿನ್ನವನ್ನು ಸಂಗ್ರಹಿಸುವ ಹೂಡಿಕೆ ಮಾಡಲು ಬಯಸಿದರೆ  ಇಟಿಎಫ್'ಗಳು ಉಪಯುಕ್ತವೆಂದು ತಿಳಿಯಬಹುದು.

ಲೇಖಕರು: ಆದಿಲ್ ಶೆಟ್ಟಿ, ಸಿಇಒ, ಬ್ಯಾಂಕ್ ಬಜಾರ್.ಕಾಂ

Follow Us:
Download App:
  • android
  • ios