ಸಾಲ ಮರು ಪಾವತಿಯ ಅವಧಿಯು ನವೆಂಬರ್ 1 ರಿಂದ ಡಿಸೆಂಬರ್ 31 ವರೆಗೆ ಅನ್ವಯವಾಗಲಿದೆ

ಮುಂಬೈ(ನ.21): ನೋಟು ರದ್ದತಿಯ ಪರಿಣಾಮ ಗೃಹ,ಕಾರು,ಕೃಷಿ ಮುಂತಾದ ಸಾಲಗಳನ್ನು ಮರುಪಾವತಿ ಮಾಡುವ ಅವಧಿಯನ್ನು 60 ದಿನಗಳ ಕಾಲ ವಿಸ್ತರಿಸಲು ಆರ್'ಬಿಐ ನಿರ್ಧರಿಸಿದ್ದು, ಇದು 1 ಕೋಟಿ ರೂ.ವರೆಗಿನ ಸಾಲಕ್ಕೆ ಮಾತ್ರ ಅನ್ವಯವಾಗುತ್ತದೆ. ಸಾಲ ಮರು ಪಾವತಿಯ ಅವಧಿಯು ನವೆಂಬರ್ 1 ರಿಂದ ಡಿಸೆಂಬರ್ 31 ವರೆಗೆ ಅನ್ವಯವಾಗಲಿದ್ದು, ರಾಷ್ಟ್ರೀಕೃತ ಹಾಗೂ ಸ್ಥಳೀಯ ಬ್ಯಾಂಕ್'ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಇದು ಅನ್ವಯವಾಗುತ್ತದೆ ಎಂದು ಆರ್'ಬಿಐ ಪ್ರಕಟಣೆ ತಿಳಿಸಿದೆ.