ಬೆಂಗಳೂರು (ಮಾ. 13): ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಕೊಂಡ ಎಂಬ  ಮಾತಿದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಯೊಬ್ಬ ಜಿರಳೆ  ಸಾಯಿಸಲು ಹೋಗಿ ಇಡೀ ಮನೆಗೆ ಬೆಂಕಿ ಹಚ್ಚಿದ್ದಾನೆ.

ಆಸ್ಟ್ರೇಲಿಯಾದ ಕ್ವೀನ್‌ಲ್ಯಾಂಡ್‌ನ ವ್ಯಕ್ತಿ ಮನೆಯ  ಅಡುಗೆ ಕೋಣೆಯಲ್ಲಿ ಇದ್ದ ಜಿರಲೆ ಸಾಯಿಸಲು ಕೀಟನಾಶಕ ಸ್ಪ್ರೇ ಮಾಡಿದ್ದು ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ  ಇಡೀ ಮನೆಗೆ ಬೆಂಕಿ ಆವರಿಸಿಕೊಂಡಿದೆ. ಅದೃಷ್ಟವಶಾತ್  ಆ ಸಂದರ್ಭದಲ್ಲಿ ಮನೆಯಲ್ಲಿ ಕುಟುಂಬದ ಇತರ  ಸದಸ್ಯರು ಇರಲಿಲ್ಲ. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ  ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಘಟನೆಯಿಂದ  ಆತನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತನ್ನ ತಪ್ಪಿಗೆ ಎರಡು ದಿನ ಕಂಬಿ  ಎಣಿಸಿ ಮನೆಗೆ ಮರಳಿದ್ದಾನೆ.