ಚಂದ್ರನ ಮೇಲೊಂದು ‘ಮನೆ’ ನಿರ್ಮಿಸಲು ಇಸ್ರೋ ಯೋಜನೆ!

First Published 27, Feb 2018, 8:50 AM IST
House Build On Moon
Highlights

ಬಾಹ್ಯಾಕಾಶದಲ್ಲಿ ಶಾಶ್ವತ ವಸತಿ ನಿರ್ಮಿಸುವ ಪ್ರಯತ್ನದ ಭಾಗವಾಗಿ ಇಸ್ರೋ, ಚಂದ್ರನ ಮೇಲೆ ಟೆಂಟ್‌ ರೀತಿಯ ಪುಟ್ಟಮನೆ(ಇಗ್ಲೂ)ಗಳನ್ನು ನಿರ್ಮಿಸುವ ಯೋಜನೆಯ ಬಗ್ಗೆ ಚಿಂತಿಸಿದೆ.

ನವದೆಹಲಿ: ಬಾಹ್ಯಾಕಾಶದಲ್ಲಿ ಶಾಶ್ವತ ವಸತಿ ನಿರ್ಮಿಸುವ ಪ್ರಯತ್ನದ ಭಾಗವಾಗಿ ಇಸ್ರೋ, ಚಂದ್ರನ ಮೇಲೆ ಟೆಂಟ್‌ ರೀತಿಯ ಪುಟ್ಟಮನೆ(ಇಗ್ಲೂ)ಗಳನ್ನು ನಿರ್ಮಿಸುವ ಯೋಜನೆಯ ಬಗ್ಗೆ ಚಿಂತಿಸಿದೆ.

ಕೆನಡಾದ ಕೇಂದ್ರ ಅರ್ಕಾಟಿಕ್‌ ಮತ್ತು ಗ್ರೀನ್‌ಲ್ಯಾಂಡ್‌ನ ಥುಲೆ ಪ್ರದೇಶದ ಜನರು ಸಾಂಪ್ರದಾಯಿಕವಾಗಿ ವಾಸಿಸಲು ಬಳಸುವ ಇಗ್ಲೂ ಮಾದರಿಯ ಮನೆಗಳನ್ನು ಚಂದ್ರನದಲ್ಲಿ ನಿರ್ಮಿಸಿ, ಬಾಹ್ಯಾಕಾಶ ಯಾನಿಗಳಿಗೆ ಬಾಹ್ಯಾಕಾಶದಲ್ಲಿ ಅವುಗಳನ್ನು ಶಾಶ್ವತ ಔಟ್‌ಪೋಸ್ಟ್‌ ಆಗಿ ಬಳಸಲು ಉದ್ದೇಶಿಸಲಾಗಿದೆ.

ಈ ಸಂಬಂಧ ಇಸ್ರೋ ಈಗಾಗಲೇ ಐದು ಮಾದರಿಗಳನ್ನು ವಿನ್ಯಾಸಗೊಳಿಸಿದ್ದು, ಇದನ್ನು ಜಾರಿಗೊಳಿಸುವುದಕ್ಕೂ ಮುನ್ನ ಕಠಿಣ ಪರಿಶೀಲನೆಗೊಳಪಡಿಸಲಿದೆ. ಚಂದ್ರನ ಮೇಲ್ಮೈ ಮೇಲೆ ಸಂಶೋಧನೆ ನಡೆಸುವವರು ಹೆಚ್ಚು ಕಾರ್ಯ ನಿರ್ವಹಿಸಲು ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ವಸತಿಗಳನ್ನು ನಿರ್ಮಿಸಲಾಗುತ್ತಿದೆ. ಇದೇ ರೀತಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಇಂಥದ್ದೇ ಯೋಜನೆ ರೂಪಿಸುವ ಬಗ್ಗೆ ಸಿದ್ಧತೆ ನಡೆಸುತ್ತಿದೆ.

loader